4
Uppinangady: ರಸ್ತೆ ಬದಿಯಲ್ಲಿದ್ದ ದೊಡ್ಡ ಗಾತ್ರದ ಸಿಮೆಂಟ್ ಮೋರಿಯನ್ನು ಶಿವರಾತ್ರಿ ದಿನ ರಾತ್ರಿ ಯಾರೋ ರಸ್ತೆಗೆ ಅಡ್ಡವಾಗಿ ಇಟ್ಟ ಪರಿಣಾಮ ಇದರ ಬಗ್ಗೆ ಗೊತ್ತಿಲ್ಲದೆ ಬೈಕ್ ಸವಾರರೊಬ್ಬರು ಮೋರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹಿರೇಬಂಡಾಡಿಯಲ್ಲಿ ನಡೆದಿದೆ. ಈ ಘಟನೆ ಬೆಳಗ್ಗೆ 5 ರ ಸುಮಾರಿಗೆ ನಡೆದಿದೆ.
ಗಾಯಗೊಂಡವರನ್ನು ಪತ್ರಿಕಾ ವಿತರಕ ರೋಹಿತಾಕ್ಷ ಎಂದು ಗುರುತಿಸಲಾಗಿದೆ. ಇವರು ಹಿರೇಬಂಡಾಡಿ ಗ್ರಾಮದ ಸರೋಳಿ ನಿವಾಸಿ. ರೋಹಿತಾಕ್ಷ ಅವರ ಕೈ, ಕಾಲು, ಭುಜಕ್ಕೆ ಗಂಭೀರ ಗಾಯವಾಗಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
