Tirumala: ವಿಶ್ವಪ್ರಸಿದ್ಧ ತಿರುಮಲ ತಿರುಪತಿಯ ಪ್ರಸಾದವಾದ ಲಡ್ಡು ತಯಾರಿಕೆಗೆ ಬಳಸುವ ಹಸುವಿನ ತುಪ್ಪದಲ್ಲಿ ಪ್ರಾಣಿಜನ್ಯ ಕೊಬ್ಬಿನ ಅಂಶ ಮಿಶ್ರಣವಾಗಿದ್ದ ಪ್ರಕರಣದ ತನಿಖೆ ಮಾಡುತ್ತಿರುವ ಎಸ್‌ಐಟಿ, ನಾಲ್ವರು ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಅಪೂರ್ವ ಚಾವ್ಡಾ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಲಡ್ಡು ಪ್ರಸಾದ ತಯಾರಿಸಲು ಸರಬರಾಜು ಮಾಡಿದ ತುಪ್ಪದಲ್ಲಿ ರಾಸಾಯನಿಕಗಳನ್ನು ಬೆರೆಸಲಾಗಿದೆ ಎಂದು ಆರೋಪಿ ಎಸ್‌ಐಟಿ ತನಿಖೆ ವೇಳೆ ಹೇಳಿದ್ದಾನೆ. ರಾಸಾಯನಿಕ ಎಂಜಿನಿಯರಿಂಗ್ ಪದವೀಧರನೂ ಆಗಿರುವ ಅಪೂರ್ವ ಚಾವ್ಡಾ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ತಿರುಪತಿ ಲಡ್ಡು ತಯಾರಿಕೆಗೆ ನಿಗದಿಪಯಂತೆ ಹಸುವಿನ ತುಪ್ಪಕ್ಕೆ ಬದಲಾಗಿ ಪ್ರಾಣಿಜನ್ಯ ಕೊಬ್ಬಿನಂಶ ಬೆರೆಸಿದ ತುಪ್ಪ ಸರಬರಾಜು ಮಾಡಿದ ಆರೋಪದಡಿಯಲ್ಲಿ ಉತ್ತರಾಖಂಡದ ಭೋಲೆಬಾಬ ಡೈರಿಯ ಬಿಪಿನ್ ಜೈನ್ ಮತ್ತು ಪೋಮಿಲ್ ಜೈನ್ ಸಹೋದರರು, ವೈಷ್ಣವಿ ಡೈರಿಯ ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಹಾಗೂ ಎಆರ್ ಡೈರಿಯ ರಾಜು ರಾಜಶೇಖರನ್ ಬಂಧನವಾಗಿದೆ.
ಆರೋಪಿ ಅಪೂರ್ವ ಚಾವ್ಡಾ ಮತ್ತು ಆರೋಪಿ ವಿಪಿನ್ ಜೈನ್‌ರನ್ನು ಹೆಚ್ಚಿನ ತನಿಖೆಗಾಗಿ ತಮ್ಮ ವಶಕ್ಕೆ ಕೋರಿ ಎಸ್‌ಐಟಿ ವಕೀಲರು ತಿರುಪತಿಯ 2ನೇ ಹೆಚ್ಚುವರಿ ಮುನ್ಸಿಫ್ ನ್ಯಾಯಾಲಯದಲ್ಲಿ ಕಸ್ಟಡಿ ಅರ್ಜಿ ಸಲ್ಲಿಸಿದ್ದಾರೆ.
ವಿಪಿನ್ ಜೈನ್, ಪೋಮಿಲ್ ಜೈನ್ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ.
