7
Cafe Coffee Day: ಕಾಫಿ ಡೇ ಎಂಟರ್‌ಪೈಸ್ ಲಿಮಿಟೆಡ್ (ಸಿಡಿಇಎಲ್) ವಿರುದ್ಧ ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆ ಆರಂಭಿಸುವಂತೆ ಬೆಂಗಳೂರಿನ ರಾಷ್ಟ್ರೀಯ ಕಂಪನಿ ಕಾನೂನು ಮಂಡಳಿ (ಎನ್‌ಸಿಎಲ್‌ಟಿ) ನೀಡಿದ್ದ ಆದೇಶವನ್ನು, ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಚೆನ್ನೈ ಪೀಠವು ರದ್ದುಪಡಿಸಿದೆ.
ಕಾಫಿ ಡೇ ಎಂಟರ್‌ಪ್ರೈಸಸ್‌ನ 228.45 ಕೋಟಿ ರು. ಬಾಕಿ ಸಂಬಂಧ ಐಡಿಬಿಐ ಟ್ರಸ್ಟಿಶಿಪ್ ಸರ್ವಿಸಸ್ ಲಿಮಿಟೆಡ್ ಸಲ್ಲಿಸಿದ ಅರ್ಜಿಯನ್ನು ಎನ್ ಸಿಎಲ್‌ಟಿ ಪುರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಿಡಿಇಎಲ್ ನ ಎಂಡಿ ಮತ್ತು ಸಿಇಒ ಮಾಳವಿಕಾ ಹೆಗ್ಡೆ, ಸಲ್ಲಿಸಿದ ಮೇಲ್ಮನವಿಯನ್ನು ಚೆನ್ನೈ ನ್ಯಾಯಪೀಠವು ಪುರಸ್ಕರಿಸಿ ಎನ್‌ಸಿಎಲ್‌ಟಿ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಇದೀಗ ಐಡಿಬಿಐ ಟ್ರಸ್ಟಿಶಿಪ್ ಸರ್ವಿಸಸ್ ಲಿಮಿಟೆಡ್ ಆದೇಶವನ್ನು ರದ್ದು ಪಡಿಸಿದೆ.
