Home » Mosque: ಮಸೀದಿಯಲ್ಲಿ ಆತ್ಮಹತ್ಯಾ ಬಾಂಬ್‌ ದಾಳಿ; ಐವರು ಸಾವು, 12ಕ್ಕೂ ಹೆಚ್ಚು ಜನರಿಗೆ ಗಾಯ

Mosque: ಮಸೀದಿಯಲ್ಲಿ ಆತ್ಮಹತ್ಯಾ ಬಾಂಬ್‌ ದಾಳಿ; ಐವರು ಸಾವು, 12ಕ್ಕೂ ಹೆಚ್ಚು ಜನರಿಗೆ ಗಾಯ

0 comments

Mosque: ರಂಜಾನ್‌ ಹಬ್ಬಕ್ಕೂ ಮೊದಲು ಮಸೀದಿಯಲ್ಲಿ ಬಾಂಬ್‌ ದಾಳಿ ನಡೆದಿರುವ ಘಟನೆ ನಡೆದಿದೆ. ವಾಯುವ್ಯ ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್‌ ದಾಳಿ ನಡೆದಿದ್ದು, ಈ ದುರ್ಘಟನೆಯಲ್ಲಿ ಐವರು ಸಾವಿಗೀಡಾಗಿದ್ದಾರೆ.

ವಾಯುವ್ಯ ಪಾಕಿಸ್ತಾನದ ಮಸೀದಿಯೊಂದರಲ್ಲಿ ಆತ್ಮಹತ್ಯಾ ಬಾಂಬಾ ದಾಳಿ ನಡೆದಿರುವ ಪರಿಣಾಮ ಐದು ಜನರು ಸಾವಿಗೀಡಾಗಿದ್ದು, 12 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ರಕ್ಷಣಾ ತಂಡದ ತಂಡ ಬಂದಿದೆ.

ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಜಿಲ್ಲೆಯ ಅಕ್ಕೋರಾ ಖಟ್ಟಕ್‌ನಲ್ಲಿ ಈ ಸ್ಫೋಟ ಸಂಭವಿಸಿದೆ. ತನಿಖೆ ನಡೆಯುತ್ತಿದ್ದು, ಮೃತರು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ಮುಖ್ಯಸ್ಥ ಅಬ್ದುಲ್‌ ರಶೀದ್‌ ಹೇಳಿದ್ದಾರೆ.

You may also like