Home » Patna: ಮನೆ ಕಟ್ಟಲು ಪ್ರಿಯಕರನ ಜೊತೆ ಸೇರಿ ತನ್ನ ಮಗನನ್ನೇ ಅಪಹರಣ ಮಾಡಿದ ತಾಯಿ

Patna: ಮನೆ ಕಟ್ಟಲು ಪ್ರಿಯಕರನ ಜೊತೆ ಸೇರಿ ತನ್ನ ಮಗನನ್ನೇ ಅಪಹರಣ ಮಾಡಿದ ತಾಯಿ

0 comments
Boy Kidnap

Patna: ಸ್ವಂತ ಮನೆ ಕಟ್ಟಲೆಂದು ಮಹಿಳೆಯೋರ್ವಳು ತನ್ನ ಪ್ರಿಯಕರನ ಜೊತೆ ಸೇರಿ ಮಗನನ್ನೇ ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಬಿಹಾರದಲ್ಲಿ ನಡೆದಿದೆ. ಮಗನನ್ನು ಅಪಹರಣ ಮಾಡಿ 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಳು.

ಆರೋಪಿ ಬಬಿತಾ ದೇವಿ ತನ್ನ ಕೃತ್ಯದ ಕುರಿತು ಒಪ್ಪಿಕೊಂಡಿದ್ದು, ಇದೀಗ ಬಬಿತಾ ದೇವಿ ಮತ್ತು ಆಕೆಯ ಪ್ರಿಯಕರ ನಿತೀಶ್‌ ಕುಮಾರ್‌ನ ಬಂಧನವಾಗಿದೆ.

ಬಾಲಕನ ಚಿಕ್ಕಪ್ಪ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ದೂರು ದಾಖಲಿಸಿದ ಪೊಲೀಸರು ತನಿಖೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. 25 ಲಕ್ಷ ನೀಡದಿದ್ದರೆ ತನ್ನ ಕುಟುಂಬದ 13 ವರ್ಷದ ಬಾಲಕನನ್ನು ಕೊಲೆ ಮಾಡುವುದಾಗಿ ಬೆದರಿಕೆ ಕರೆ ಬಂದಿತ್ತು ಎಂದು ದೂರಿನಲ್ಲಿ ತಿಳಿಸಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.

ಮೊದಲಿಗೆ ಬಬಿತಾ ದೇವಿಯನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಅಪಹರಣದಲ್ಲಿ ತನ್ನ ಪಾತ್ರವಿದೆ ಎಂದು ಒಪ್ಪಿಕೊಂಡಿದ್ದಾಳೆ. ನಂತರ ಪೊಲೀಸರು ಮಗುವನ್ನು ಪತ್ತೆ ಮಾಡಿ ಮನೆಯವರಿಗೆ ಒಪ್ಪಿಸಿದ್ದಾರೆ.

You may also like