Home » Andhra Govt: ಆಶಾ ಕಾರ್ಯಕರ್ತೆಯರಿಗೆ ಬಂಪರ್‌ ಸಿಹಿ ಸುದ್ದಿ!

Andhra Govt: ಆಶಾ ಕಾರ್ಯಕರ್ತೆಯರಿಗೆ ಬಂಪರ್‌ ಸಿಹಿ ಸುದ್ದಿ!

0 comments
Earn Money

Andhra Govt: ಸಿಎಂ ಚಂದ್ರಬಾಬು ನೇತೃತ್ವದ ಆಂಧ್ರಪ್ರದೇಶ ಸರಕಾರ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ದೇಶದಲ್ಲೇ ಅತಿ ಹೆಚ್ಚು ಸಂಬಳ ನೀಡುತ್ತಿದೆ. ಮಾಸಿಕ ರೂ.10000 ಸಂಬಳ ನೀಡುತ್ತಿದೆ. ಇದೀಗ ಅವರಿಗೆ ಗ್ರ್ಯಾಚ್ಯುಟಿ, ವೇತನ ಸಹಿತ ಮಾತೃತ್ವ ರಜೆಯಂತಹ ಸವಲತ್ತುಗಳನ್ನು ನೀಡಲು ಮುಂದಾಗಿದೆ.

ಆಶಾ ಕಾರ್ಯಕರ್ತೆಯರ ನಿವೃತ್ತಿ ವಯಸ್ಸನ್ನು 60ರಿಂದ 62 ಕ್ಕೆ ಏರಿಕೆ ಮಾಡಲಾಗುವುದು. ಮೊದಲ 2 ಹೆರಿಗೆಗಳ ಸಮಯದಲ್ಲಿ 6 ತಿಂಗಳವರೆಗೆ ವೇತನ ಸಹಿತ ಮಾತೃತ್ವ ರಜೆ ನೀಡಲಾಗುವುದು. ಇದರ ಜೊತೆಗೆ 30 ವರ್ಷ ಸೇವೆ ಸಲ್ಲಿಸಿದ ಕಾರ್ಯಕರ್ತೆಯರಿಗೆ ನಿವೃತ್ತಿ ಸಮಯದಲ್ಲಿ 1.5 ಲಕ್ಷ ರೂ. ಗ್ರಾಚ್ಯುಟಿ ನೀಡುವ ಮೂಲಕ ಬೇಡಿಕೆಯೊಂದನ್ನು ಈಡೇರಿಸಲಾಗುವುದು.

ಈ ಮೂಲಕ ಆಶಾ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ನೀಡಿದ ಮೊದಲ ರಾಜ್ಯ ಎಂದೆನಿಸಿಕೊಳ್ಳಲಿದೆ ಆಂಧ್ರಪ್ರದೇಶ.

ಅಂದ ಹಾಗೆ, ಕರ್ನಾಟಕ ಹಾಗೂ ಹರ್ಯಾಣದಲ್ಲಿ 4 ಸಾವಿರ ರೂ, ಕೇರಳದಲ್ಲಿ 5 ಸಾವಿರ ರೂ, ಸಿಕ್ಕಿಂನಲ್ಲಿ 6 ಸಾವಿರ ರೂ, ತೆಲಂಗಾಣದಲ್ಲಿ 7.5 ಸಾವಿರ ರೂ, ಉತ್ತರ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರಿಗೆ ರೂ.750, ಹಿಮಾಚಲ ಪ್ರದೇಶದಲ್ಲಿ 2 ಸಾವಿರ ರೂ, ರಾಜಸ್ಥಾನದಲ್ಲಿ ರೂ.2700, ಪಶ್ಚಿಮ ಬಂಗಾಳ ಮತ್ತು ದೆಹಲಿಯಲ್ಲಿ ರೂ.3 ಸಾವಿರ, ವೇತನ ನೀಡಲಾಗುತ್ತಿದೆ.

You may also like