Home » Rohit Sharma : ರೋಹಿತ್‌ ಶರ್ಮಾ ದಪ್ಪಗಿದ್ದಾರೆ-ಕಾಂಗ್ರೆಸ್‌ ವಕ್ತಾರೆ ಪೋಸ್ಟ್‌, ಪಕ್ಷದಿಂದ ಛೀಮಾರಿ

Rohit Sharma : ರೋಹಿತ್‌ ಶರ್ಮಾ ದಪ್ಪಗಿದ್ದಾರೆ-ಕಾಂಗ್ರೆಸ್‌ ವಕ್ತಾರೆ ಪೋಸ್ಟ್‌, ಪಕ್ಷದಿಂದ ಛೀಮಾರಿ

0 comments

Rohit Sharma: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ(Rohit Sharma) ಕುರಿತು ಕಾಂಗ್ರೆಸ್‌ ವಕ್ತಾರೆ ಶಮಾ ಮೊಹಮ್ಮದ್‌ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ರೋಹಿತ್‌ ಶರ್ಮಾ ದಪ್ಪಗಿದ್ದಾರೆ. ಅವರು ತೂಕ ಕಳೆದುಕೊಳ್ಳಬೇಕಾಗಿದೆ. ರೋಹಿತ್‌ ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ ಎಂದು ಶಮಾ ಮೊಹಮ್ಮದ್‌ ಬರೆದುಕೊಂಡಿದ್ದಾರೆ. ಶಮಾ ಹೇಳಿಕೆ ಬೆನ್ನಲ್ಲೇ ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ಹೇಳಿಕೆ ವಿವಾದ ಜೋರಾಗುತ್ತಿದ್ದಂತೆ ಕಾಂಗ್ರೆಸ್‌ ಪಕ್ಷ ಶಮಾಗೆ ಛೀಮಾರಿ ಹಾಕಿದೆ. ಟ್ವೀಟ್‌ ಡಿಲೀಟ್‌ ಮಾಡಿ ಎನ್ನುವಂತೆ ತಾಕೀತು ಮಾಡಿದೆ.

ಶಮಾ ಅವರು ನೀಡಿರುವ ಹೇಳಿಕೆ ವೈಯಕ್ತಿಕವಾಗಿದ್ದು, ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಪೋಸ್ಟ್‌ ಡಿಲೀಟ್‌ ಮಾಡಲು ಸೂಚಿಸಲಾಗಿದೆ. ಭವಿಷ್ಯದಲ್ಲಿ ಎಚ್ಚರಿಕೆ ವಹಿಸಲು ತಿಳಿಸಲಾಗಿದೆ ಎಂದು ಕಾಂಗ್ರೆಸ್‌ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ತಿಳಿಸಿದ್ದಾರೆ.

You may also like