Home » Death: ಮೆಕ್ಕಾ ಯಾತ್ರೆ ಕೈಗೊಂಡ ಚಾರ್ಮಾಡಿ ಮಾಜಿ ಗ್ರಾ. ಪಂ ಸದಸ್ಯ ನಿಧನ!

Death: ಮೆಕ್ಕಾ ಯಾತ್ರೆ ಕೈಗೊಂಡ ಚಾರ್ಮಾಡಿ ಮಾಜಿ ಗ್ರಾ. ಪಂ ಸದಸ್ಯ ನಿಧನ!

0 comments

Death: ಚಾರ್ಮಾಡಿ ಗ್ರಾಮದ ಜಿ. ಕೆ ಮನೆ ನಿವಾಸಿ ಅಹ್ಮದ್ ಕುಂಜಿ (71) ಇವರು ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಮಾ.3 ರಂದು ಅನಾರೋಗ್ಯ ಕಾಣಿಸಿಕೊಂಡು ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ (Death) .

ಅಹ್ಮದ್ ಕುಂಜಿ ಅವರು ಮಾಜಿ ಚಾರ್ಮಾಡಿ ಗ್ರಾ. ಪಂ ಸದಸ್ಯ ಹಾಗೂ ಕಕ್ಕಿಂಜೆಯ ಹಿರಿಯ ಮೀನು ವ್ಯಾಪಾರಿಯು ಆಗಿದ್ದರು. ಇವರು

ರಿಯಾದ್ ನಲ್ಲಿರುವ ತನ್ನ ಪುತ್ರ ಫಾರೂಕ್ ಅವರ ಮನೆಯಲ್ಲಿ ನೆಲೆಸಿ 3 ದಿನಗಳ ಹಿಂದೆ ಒಂದು ಹಂತದ ಉಮ್ರಾ ಯಾತ್ರೆ ಮುಗಿಸಿ ಮಾ.3 ರಂದೇ ಎರಡನೇ ಹಂತದ ಉಮ್ರಾ ಪರ್ಯಟನೆ ಉದ್ದೇಶಿದ್ದರು ಎನ್ನಲಾಗಿದೆ.

ಮೃತರ ಅಂತ್ಯಸಂಸ್ಕಾರ ಮೆಕ್ಕಾದಲ್ಲೇ ಭಾರತೀಯ ಕಾಲಮಾನ ರಾತ್ರಿ 9.00. ಕ್ಕೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತರು ಮಕ್ಕಳಾದ ಸಿದ್ದೀಕ್, ನಝೀರ್, ರಶೀದ್, ಅಶ್ರಫ್, ಹಕೀಮ್, ಫಾರೂಕ್, ಹಂಝ (ಜಲೀಲ್), ಫಹೀದ್, ಝೀನತ್, ಆಯಿಶಾ ಮತ್ತು ಸಾಜಿದಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

You may also like