Home » Kolara: ‘ಪ್ರದೀಪ ನನ್ನನ್ನೇ ಪ್ರೀತಿಸುವಂತೆ ಮಾಡಿದ್ರೆ ಮುಡಿಕೊಡುತ್ತೇನೆ ದೇವರೇ’ – ದೇವರ ಹುಂಡಿಯಲ್ಲಿ ಯುವತಿಯೊಬ್ಬಳ ವಿಚಿತ್ರ ಬೇಡಿಕೆ ಪತ್ರ

Kolara: ‘ಪ್ರದೀಪ ನನ್ನನ್ನೇ ಪ್ರೀತಿಸುವಂತೆ ಮಾಡಿದ್ರೆ ಮುಡಿಕೊಡುತ್ತೇನೆ ದೇವರೇ’ – ದೇವರ ಹುಂಡಿಯಲ್ಲಿ ಯುವತಿಯೊಬ್ಬಳ ವಿಚಿತ್ರ ಬೇಡಿಕೆ ಪತ್ರ

0 comments

Kolara: ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ದೇವರಲ್ಲಿ ನಾವು ಬದುಕಿನ ಯಶಸ್ಸಿಗಾಗಿ, ನೆಮ್ಮದಿಗಾಗಿ ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ. ಅಲ್ಲದೆ ಕೆಲವರು ಹರಕೆಗಳನ್ನು ಹೊತ್ತು ಹುಂಡಿಗೆ ಹಣವನ್ನು ಕೂಡ ಹಾಕುತ್ತಾರೆ. ಇತ್ತೀಚಿನ ದಿನದಲ್ಲಿ ಹೊಸ ಟ್ರೆಂಡ್ ಒಂದು ಬೆಳೆದಿದ್ದು ಕೆಲವು ಭಕ್ತರು ತಮ್ಮ ಬೇಡಿಕೆಗಳನ್ನು ಪತ್ರದಲ್ಲಿ ಬರೆದು ಹುಂಡಿಯಲ್ಲಿ ಹಾಕುತ್ತಿದ್ದಾರೆ. ಅಂತೆಯೇ ಇದೀಗ ಕೋಲಾರ ಜಿಲ್ಲೆಯ ಮಾಲೂರಿನ ಚಿಕ್ಕ ತಿರುಪತಿಯ ದೇವರ ಹುಂಡಿಯಲ್ಲಿ ಯುವತಿಯೊಬ್ಬಳು ವಿಚಿತ್ರ ಬೇಡಿಕೆ ಒಂದನ್ನು ಸಲ್ಲಿಸಿ ಹುಂಡಿಗೆ ಪತ್ರ ಹಾಕಿದ್ದಾಳೆ.

ಈ ಪತ್ರದಲ್ಲೇನಿದೆ?

ಇನ್ನು ಯುವತಿಯೊಬ್ಬಳು ಬರೆದಿರುವ ಪತ್ರ ಇದಾಗಿದ್ದು, ಇದರಲ್ಲಿ “ನಾ ನಿನ್ನ ಸನ್ನಿಧಿಗೆ ಬಂದು ತಲೆ ಮುಡಿ ಕೊಡುತ್ತೇನೆ. ದಯವಿಟ್ಟು ಪ್ರದೀಪ ನಾನು ಬೇಗ ಒಂದಾಗ ಬೇಕು. ಅವನು ನನ್ನ ಬಿಟ್ಟು ಇರುವಂತೆ ಆಗಬಾರದು. ಆಫೀಸ್ ನಲ್ಲಿ ಎಲ್ಲರಿಗಿಂತ ನನ್ನ ಜಾಸ್ತಿ ಪ್ರೀತಿಸಬೇಕು. ಆದಷ್ಟು ಬೇಗ ನಾವಿಬ್ಬರೂ ಒಂದಾಗಬೇಕು. ಆಫೀಸ್ ನಲ್ಲಿ ನನ್ನನ್ನೇ ನೋಡಬೇಕು. ಅವನ ಮೇಲೆ ನಂಗಿರೊ ಫೀಲೀಂಗ್ ಹಾಗೆ ಅವನಿಗೂ ಶೇಕಡಾ 7% ಜಾಸ್ತಿ ಫೀಲಿಂಗ್ ಇರಬೇಕು” ಎಂದು ಪ್ರೇಮ ನಿವೇದನೆ ಪ್ರಸ್ತಾಪಿಸಿ ಹರಕೆ ಹೊತ್ತು ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ.

You may also like