Home » KOS: ಕರ್ನಾಟಕ ಮುಕ್ತ ಶಾಲೆ ಪರೀಕ್ಷೆ ಎ.15 ರಿಂದ ಪ್ರಾರಂಭ

KOS: ಕರ್ನಾಟಕ ಮುಕ್ತ ಶಾಲೆ ಪರೀಕ್ಷೆ ಎ.15 ರಿಂದ ಪ್ರಾರಂಭ

0 comments
CBSE Compartment Exams 2024

KOS: ಕರ್ನಾಟಕ ಮುಕ್ತ ಶಾಲೆ 2025ನೇ ಸಾಲಿನ ಮುಖ್ಯ ಪರೀಕ್ಷೆಗೆ (10ನೇ ತರಗತಿ) ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕಲಿಕಾ ಕೇಂದ್ರಗಳಲ್ಲಿ ಹೊಸದಾಗಿ ದಾಖಲಾಗಿರುವ ಅಭ್ಯರ್ಥಿಗಳ ಮಾಹಿತಿಗಳನ್ನು ಸಂಗ್ರಹಿಸಲು ಅಭ್ಯರ್ಥಿಗಳ ದಾಖಲಾತಿ ಹೆಸರಿನ ತಂತ್ರಾಂಶ ರೂಪಿಸಲಾಗಿದ್ದು, ದಾಖಲಾತಿಗಳನ್ನು ಇಂದೀಕರಿಸುವ ಕೆಲಸ ಪೂರ್ಣಗೊಂಡಿದೆ. ನೋಂದಣಿ ಹೀಗಾಗಿ ಹೊಸ ದಾಖಲಾತಿಗೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

 

ಪ್ರಸ್ತುತ ಸಾಲಿನಲ್ಲಿ ಅಭ್ಯರ್ಥಿಗಳ ದಾಖಲಾತಿ ಮೂಲಕ ನೋಂದಾಯಿಸಿದ ಹೊಸ ಅರ್ಹ ಅಭ್ಯರ್ಥಿಗಳು ಹಾಗೂ ಅರ್ಹ ಪುನರಾವರ್ತಿತ ಅಭ್ಯರ್ಥಿಗಳಿಂದ ಮುಖ್ಯ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದು. ದಾಖಲಾತಿ ನೋಂದಣಿ ವೇಳೆ ನೀಡಲಾಗಿರುವ ನೋಂದಣಿ ಸಂಖ್ಯೆಯನ್ನು ಬಳಸಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಅರ್ಹತೆಗಳೇನು?: ಅಭ್ಯರ್ಥಿಯು ಏಳನೇ ತರಗತಿಯವರೆಗೆ ವ್ಯಾಸಂಗ ಮಾಡಿರಬೇಕು

(ಉತ್ತೀರ್ಣ/ಅನುತ್ತೀರ್ಣ, ಶೈಕ್ಷಣಿಕ ವರ್ಷದ ಮಾ. 1ನೇ ತಾರೀಖಿಗೆ ಅನ್ವಯ ವಾಗುವಂತೆ 15 ವರ್ಷ ತುಂಬಿರಬೇಕು. ಪರೀಕ್ಷಾ ನೋಂದಣಿಗೆ ಮಾ.12 ಕೊನೆಯ ದಿನ (ದಂಡಶುಲ್ಕದೊಂದಿಗೆ ಮಾ.14). ಏ.15ರಿಂದ 25ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

You may also like