Home » Ram Mandir: ಶ್ರೀ ರಾಮ ಮಂದಿರ ದರ್ಶನ ವೇಳೆ ವಿಸ್ತರಣೆ

Ram Mandir: ಶ್ರೀ ರಾಮ ಮಂದಿರ ದರ್ಶನ ವೇಳೆ ವಿಸ್ತರಣೆ

0 comments

Ram Mandir: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಭಕ್ತರಿಗೆ ದೇವರ ದರ್ಶನ ಸಮಯವನ್ನು ವಿಸ್ತರಿಸಲಾಗಿದೆ. ಒಂದು ಗಂಟೆ ಮುಂಚಿತವಾಗಿಯೇ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಈವರೆಗೆ ಬೆಳಗ್ಗೆ 7 ಗಂಟೆಗೆ ಬಾಗಿಲು ತೆರೆಯಲಾಗುತ್ತಿತ್ತು. ಇನ್ನು ಮುಂದೆ ದೇವಸ್ಥಾನ ಬೆಳಗ್ಗೆ 6 ಗಂಟೆಗೇ ಬಾಗಿಲು ತೆರೆಯುತ್ತದೆ.

ಶ್ರೀರಾಮ ಮಂದಿರ ದರ್ಶನಕ್ಕೆ ಹೊಸ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಶೃಂಗಾರ ಆರತಿ ನಂತರ ಭಕ್ತರು ಬೆಳಗ್ಗೆ 6.30ರಿಂದ 11.50ರವರೆಗೆ ದೇವಾಲಯ ಪ್ರವೇಶಿಸಬಹುದು. ನಂತರ ರಾಜಭೋಗ ಆರತಿಗಾಗಿ ಮಧ್ಯಾಹ್ನ 12 ಗಂಟೆಗೆ ದೇವಾಲಯ ಮುಚ್ಚಲಾಗುತ್ತದೆ. ದರ್ಶನ ಸಮಯ ಮಧ್ಯಾಹ್ನ 1ರಿಂದ ಸಂಜೆ 6.50ರವರೆಗೆ ಇರುತ್ತದೆ. ಬಳಿಕ ಸಂಜೆ 7 ಗಂಟೆಗೆ ಆರತಿ. ನಂತರ ರಾತ್ರಿ 9.45ರವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶ ವಿರಲಿದೆ. ರಾತ್ರಿ 10 ಗಂಟೆಗೆ ಶಯನ ಆರತಿ(ಕೊನೆ ಆರತಿ). ನಂತರ, ಬೆಳಳಗ್ಗೆವರೆಗೂ ದೇವಾಲಯ ಬಾಗಿಲು ಬಂದ್ ಆಗುತ್ತದೆ ಎಂದು ರಾಮ ಮಂದಿರ ಟ್ರಸ್ಟ್ ಮಾಧ್ಯಮ ವಿಭಾಗ ತಿಳಿಸಿದೆ.

You may also like