3
Mangalore: ಲೈಸೆನ್ಸ್ ಇಲ್ಲದ, ಅಪ್ರಾಪ್ತ ಬಾಲಕನೋರ್ವ ಸ್ಕೂಟರ್ ಚಲಾಯಿಸಿದ ಕಾರಣ ಆತನ ತಂದೆ ರೂ.26000 ದಂಡ ಕಟ್ಟಿದ ಘಟನೆ ಬಂಟ್ವಾಳದಲ್ಲಿ ಬುಧವಾರ ನಡೆದಿದೆ.
ಬಂಟ್ವಾಳ ಸಂಚಾರ ಠಾಣಾ ಪೊಲೀಸರು ಎಸ್.ಐ.ಸುತೇಶ್ ನೇತೃತ್ವದಲ್ಲಿ ಅಲ್ಲಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬಾಲಕನೋರ್ವ ಪರ್ಲಿಯಾ ಸಮೀಪ ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿರುವುದು ಕಂಡಿದೆ. ವಿಚಾರಣೆ ಮಾಡಿದಾಗ ಆತ ಅಪ್ರಾಪ್ತ ವಯಸ್ಕನಾಗಿರುವುದು ತಿಳಿದು ಬಂದಿದ್ದು, ಲೈಸೆನ್ಸ್ ಇಲ್ಲದಿರುವುದು ಕಂಡು ಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ. ನಂತರ ಬಾಲಕನ ತಂದೆ ಸಮೀರ್ ಎಂಬುವವರಿಗೆ ಬಂಟ್ವಾಳ ಜೆಎಂಎಫ್‌ಸಿ ಕೋರ್ಟಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ರೂ.26ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.
