Dakshina Kannada: ದಕ್ಷಿಣ ಕನ್ನಡ ಸೌಜನ್ಯ ಪ್ರಕರಣದ ಕುರಿತು ವೀಡಿಯೋ ಮಾಡಿದ್ದ ಸಮೀರ್ ಎಂಡಿ ಎಂಬುವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಬಳ್ಳಾರಿಯಿಂದ ಪೊಲೀಸರು ಸಮೀರ್ ಬಂಧನಕ್ಕೆ ಬಂದಿದ್ದು, ವಿಚಾರಣೆಗೆ ಸಹಕರಿಸೋದಾಗಿ ಭರವಸೆ ನೀಡಿದ ಮೇಲೆ ನೋಟಿಸ್ ನೀಡಿ ಹಿಂದಿರುಗಿದ್ದಾರೆ ಎಂದು ಸಮೀರ್ ಫೇಸ್ಬುಕ್ ಲೈವ್ನಲ್ಲಿ ಸಮೀರ್ ಹೇಳಿರುವ ಕುರಿತು ವರದಿಯಾಗಿದೆ. ಮಿಲಿಯನ್ ವ್ಯೂವ್ ಪಡೆದುಕೊಳ್ಳುತ್ತಲೇ ನನಗೆ ಭಯ ಶುರುವಾಯ್ತು. ನನ್ನ ವೈಯಕ್ತಿಕ ಮಾಹಿತಿ ಮತ್ತು ನನ್ನ ವಿಳಾಸವನ್ನು ಸೋಶಿಯಲ್ ಲೀಕ್ ಮಾಡಲಾಗಿದೆ. ನನಗೆ ಜೀವ ಬೆದರಿಕೆ ಕರೆಗಳ ಬರಲು ಆರಂಭಿಸಿದವು. ಪೊಲೀಸರ ಬಳಿ ಹೋದರೆ ನನಗೆ ರಕ್ಷಣೆ ಸಿಗುತ್ತೆ ಎಂಬ ನನಗೆ ನಂಬಿಕೆ ಇಲ್ಲ. ಮಹೇಶ್ ಶೆಟ್ಟಿ ತಿಮರೋಡಿ ತಂಡದ ಸದಸ್ಯರನ್ನು ಸಂಪರ್ಕಿಸಿದೆ. ಅವರು ಕೂಡಲೇ ನನಗೆ ವಕೀಲರ ಸಹಾಯ ನೀಡಿದ್ದಾರೆ ಎಂದು ಸಮೀರ್ ವೀಡಿಯೋದಲ್ಲಿ ಹೇಳಿದ್ದಾರೆ.
ಸೌಜನ್ಯ ವೀಡಿಯೋ ಮಾಡುವ ಮೊದಲು ನನಗೆ ಗಿರೀಶ್ ಅಥವಾ ಮಹೇಶ್ ಶೆಟ್ಟಿಯವರಿಗೂ ನಮಗೆ ಪರಿಚಯವೇ ಇರಲಿಲ್ಲ. ಇವರು ಯಾರು ನನಗೆ ವಿಡಿಯೋ ಮಾಡುವಂತೆ ಹೇಳಿಲ್ಲ ಎಂದು ರಂಜಾನ್ ತಿಂಗಳಿನಲ್ಲಿ ಅಲ್ಲಾಹುವಿನ ಮೇಲೆ ಆಣೆ ಮಾಡುತ್ತೇನೆ ಎಂದು ಸಮೀರ್ ತಮ್ಮ ವಿರುದ್ಧ ಬಂದ ಆರೋಪಗಳಿಗೆ ಉತ್ತರ ನೀಡಿದ್ದಾರೆ.
ಬಳ್ಳಾರಿ ಪೊಲೀಸರು ಸಮೀರ್ ನನ್ನು ಬಂಧನ ಮಾಡಬೇಕೆನ್ನುವ ಉದ್ದೇಶದಿಂದ ಬಂದಿದ್ದರು. ತನಿಖೆಗೆ ಸಹಕರಿಸೋದಾಗಿ ಹೇಳಿದ ಮೇಲೆ ನೋಟಿಸ್ ನೀಡಿ ಹಿಂದಿರುಗಿದ್ದಾರೆ.
