3
Sullia: ಕರ್ನಾಟಕ ರಾಜ್ಯ ರೈತ ಉತ್ಪಾದಕ ಸಹಕಾರಿ ಸಂಘ ಬೆಂಗಳೂರು ಇದರ ನಿರ್ದೇಶಕರಾಗಿ ವೀರಪ್ಪ ಗೌಡ ಕನ್ಕಲ್ ಅವಿರೋಧ ಆಯ್ಕೆಯಾಗಿದ್ದಾರೆ.
ರಾಜ್ಯದ ರೈತ ಉತ್ಪಾದಕ ಸಂಸ್ಥೆಗಳ ಸಹಕಾರಿ ಸಂಘಕ್ಕೆ ರಾಜ್ಯದ ಮೂರು ಜಿಲ್ಲೆಗೆ ಒಬ್ಬರಂತೆ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ. ಅದರಂತೆ ದಕ್ಷಿಣ ಕನ್ನಡ, ಕೊಡಗು, ಉಡುಪಿ ಜಿಲ್ಲೆಗಳಿಗೆ ಒಳಪಟ್ಟು ವೀರಪ್ಪ ಗೌಡರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಬೆಳಗಾವಿ ಭಾಗದಿಂದ ಒಬ್ಬರು ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 10 ನಿರ್ದೇಶಕ ಸ್ಥಾನಕ್ಕೆ ಮಾ.22ರಂದು ಚುನಾವಣೆ ನಡೆಯಲಿದೆ.
