Home » Puttur: ಪುತ್ತೂರು: ಮಾ.9: ವಾಹನ ಚಾಲಕರಿಗೆ ಕಾರ್ಮಿಕ ಕಾರ್ಡು ವಿತರಣೆ

Puttur: ಪುತ್ತೂರು: ಮಾ.9: ವಾಹನ ಚಾಲಕರಿಗೆ ಕಾರ್ಮಿಕ ಕಾರ್ಡು ವಿತರಣೆ

by ಕಾವ್ಯ ವಾಣಿ
0 comments

Puttur: ಪುತ್ತೂರು (Puttur) ಶಾಸಕ ಅಶೋಕ್ ರೈ ಅವರ ನಿರಂತರ ಹೋರಾಟದ ಫಲವಾಗಿ ಕರ್ನಾಟಕ ಸರಕಾರ ಕಾರ್ಮಿಕ ಇಲಾಖಾ ವ್ಯಾಪ್ತಿಗೆ ಚಾಲಕರನ್ನು ಸೇರಿಸಿದ್ದು, ಇದು ಬಡ ಚಾಲಕರಿಗೆ ವರದಾನವಾಗಿದೆ. ಕಾರ್ಮಿಕ ಇಲಾಖೆಗೆ ಚಾಲಕರು ತನ್ಮ ಹೆಸರು ನೋಂದಾಯಿಸಿಕೊಂಡಲ್ಲಿ ಸರಕಾರದಿಂದ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.

ಮಾ. 9 ರಂದು ಉಚಿತ ನೋಂದಣಿ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ರಿಕ್ಷಾ, ಹಾಗೂ ಇತರೆ ಘನ ವಾಹನ ಚಾಲಕರು, ನಿರ್ವಾಹಕರು, ಕ್ಲೀನರ್, ಗ್ಯಾರೇಜ್ ಪಂಕ್ಚರ್ ಹಾಕುವವರು, ಗ್ಯಾರೇಜು ಕಾರ್ಮಿಕರು ನೋಂದಾವಣಾ ಶಿಭಿರದಲ್ಲಿ
ಭಾಗವಹಿಸಬಹುದು.

ಬೇಕಾಗುವ ದಾಖಲೆಗಳು: ಆಧಾರ್ ಕಾರ್ಡ್, ರೇಶನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಲೈಸೆನ್ಸ್ , ಬ್ಯಾಡ್ಜ್ ( ಚಾಲಕರಿಗೆ) ಪೊಟೋ, ಕುಟುಂಬದ ಅವಲಂಬಿತರ ಆಧಾರ್ ಕಾರ್ಡ್, ಆಧಾರ್ ಲಿಂಕ್ ಆದ ಮೊಬೈಲ್‌, ಮತ್ತು ಉದ್ಯೋಗ ಪ್ರಮಾಣಪತ್ರ / ಸ್ವಯಂ ಘೋಷಣಾ ಪತ್ರ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ 9449663719, 8904707969.

You may also like