TTD: ತಿರುಪತಿ ತಿರುಮಲ ದೇವಾಲಯ ಮಂಡಳಿಯು ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಾಗಿ ಮೀಸಲಿರುವ ರೂಮ್ ನಿಯಮಗಳಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ.
ತಿರುಪತಿಯಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗಾಗಿ 7,500ಕ್ಕೂ ಹೆಚ್ಚು ಕೊಠಡಿಗಳಿದ್ದು ಇದೀಗ ಜನಸಾಮಾನ್ಯರಿಗೆ ಇನ್ನು ಕೊಠಡಿಗಳ ಸಂಖ್ಯೆ ಹೆಚ್ಚಿಸಲಾಗಿದೆ. ಆದರೆ ರಾಜಕಾರಣಿಗಳು, ಸಚಿವರು, ಪೊಲೀಸರು ಸೇರಿದಂತೆ ಇತರ ಉನ್ನತ ಹುದ್ದೆಗಳಲ್ಲಿರುವವರ ಶಿಫಾರಸು ಪತ್ರವನ್ನು ಹಿಡಿದುಕೊಂಡು ಬರುವ ಭಕ್ತರಿಗೆ ರೂಂ ನೀಡುವ ಪದ್ಧತಿಯಲ್ಲಿ ಬದಲಾವಣೆ ಮಾಡಾಗಿದೆ.
ಹೌದು, ಇಷ್ಟು ದಿನ ತಿರುಪತಿ ದರುಶ ಟಿಕೆಟ್ ಇಲ್ಲದಿದ್ದರೂ ಈ ರೀತಿಯ ಶಿಫಾರಸು ಪತ್ರ ತರುವ ಭಕ್ತರಿಗೆ ಕೊಠಡಿ ವ್ಯವಸ್ಥೆ ಮಾಡಲಾಗುತ್ತಿತ್ತು. ಇನ್ಮುಂದೆ ಕೊಠಡಿ ಪಡೆಯಲು ತಿರುಪತಿ ದರುಶ ಟಿಕೆಟ್ ಕಡ್ಡಾಯವಾಗಿದೆ. ಟಿಕೆಟ್ ಇಲ್ಲದಿದ್ದರೆ ಕೊಠಡಿ ವ್ಯವಸ್ಥೆ ಇರುವುದಿಲ್ಲ. ಶಿಫಾರಸಿನ ಪತ್ರದ ಕಾರಣಕ್ಕೆ ಕೊಠಡಿ ನೀಡಲಾಗುವುದಿಲ್ಲ. ಜನಸಾಮಾನ್ಯರಿಗೆ ಈ ಕೊಠಡಿಗಳನ್ನು ಮೀಸಲಿಡಲಾಗಿದೆ. ಹೀಗಾಗಿ ತಿರುಪತಿ ದರುಶ ಟಿಕೆಟ್ ಇರುವ ಭಕ್ತರು ಯಾವುದೇ ಸಮಸ್ಯೆ ಇಲ್ಲದೆ ಕೊಠಡಿ ಪಡೆಯಬಹುದು ಎಂದು ತಿರುಪತಿ ತಿರುಮಲ ದೇವಸ್ಥಾನಂ ಹೇಳಿದೆ.
