Home » Bengaluru : ಜೋರಾದ ನಿದ್ದೆಯಲ್ಲಿದ್ದ ಪ್ರೇಯಸಿ , 12ನೇ ಮಹಡಿಯಿಂದ ಜಿಗಿದು ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಯುವಕ ಆತ್ಮಹತ್ಯೆ!!

Bengaluru : ಜೋರಾದ ನಿದ್ದೆಯಲ್ಲಿದ್ದ ಪ್ರೇಯಸಿ , 12ನೇ ಮಹಡಿಯಿಂದ ಜಿಗಿದು ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಯುವಕ ಆತ್ಮಹತ್ಯೆ!!

0 comments

Bengaluru : ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಯುವಕನೋರ್ವ ಹನ್ನೆರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತಪಟ್ಟ ಯುವಕ ಉತ್ತರ ಪ್ರದೇಶ ಮೂಲದ ಮಯಾಂಕ್ ರಜನಿ ಎಂದು ಗುರುತಿಸಲಾಗಿದೆ.

ನಗರದ ಹರಳೂರು ಕೂಡ್ಲು ರಸ್ತೆಯ ಎಸ್‌ಎನ್‌ಎನ್‌ ರಾಜ್ ಎಟರ್ನಿಯಾ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಪ್ರೇಯಸಿ ಜತೆ ಲಿವ್‌ಇನ್ ರಿಲೇಶನ್‌ಶಿಪ್‌ನಲ್ಲಿ ವಾಸವಿದ್ದ. ಈ ವೇಳೆ ತನ್ನ ಪ್ರೇಯಸಿ ನಿದ್ದೆಯಲ್ಲಿರುವ ಸಂದರ್ಭದಲ್ಲಿ ಮಾರ್ಚ್ 4ರ ಬೆಳಗ್ಗೆ ಐದು ಗಂಟೆಯ ಸಮಯಕ್ಕೆ ಮಯಾಂಕ್ ರಜನಿ ಹನ್ನೆರಡನೇ ಮಹಡಿಯ ತನ್ನ ಫ್ಲಾಟ್‌ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬಳಿಕ ಅಪಾರ್ಟ್‌ಮೆಂಟ್‌ ರೌಂಡ್ಸ್ ಬಂದ ಸೆಕ್ಯೂರಿಟಿಗೆ ಶವ ಕಣ್ಣಿಗೆ ಬಿದ್ದಿದೆ. ಕೂಡಲೇ ಗಾಬರಿಗೊಂಡು ಮಯಾಂಕ್ ರಜನಿ ಮನೆಗೆ ತೆರಳಿ ಬಾಗಿಲು ಬಡಿದಿದ್ದಾರೆ. ಬಾಗಿಲು ತೆರೆಗೆ ಮಯಾಂಕ್ ರಜನಿ ಪ್ರೇಯಸಿ ವಿಷಯ ತಿಳಿದು ಗಾಬರಿಗೊಂಡಿದ್ದಾಳೆ.

ಅಂದಹಾಗೆ ಮೃತ ಮಯಾಂಕ್ ರಜನಿ ಸ್ಟಾರ್ಟ್‌ಅಪ್ ಕಂಪನಿಯೊಂದನ್ನು ನಗರದಲ್ಲಿ ಆರಂಭಿಸಿದ್ದ. ಆದರೆ ಆ ಕಂಪನಿಯಿಂದ ನಷ್ಟ ಉಂಟಾದ ಕಾರಣ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅನುಮಾನಗಳು ವ್ಯಕ್ತವಾಗಿದ್ದು, ಪರಪ್ಪನ ಅಗ್ರಹಾರ ಪೊಲೀಸರು ಅಸಹಜ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದು ವ್ಯವಹಾರದಲ್ಲಿ ಉಂಟಾದ ನಷ್ಟಕ್ಕೆ ಮಾಡಿಕೊಂಡ ಆತ್ಮಹತ್ಯೆಯೋ ಅಥವಾ ಬೇರೇ ಕಾರಣಕ್ಕೆ ಘಟನೆ ಸಂಭವಿಸಿದೆಯಾ ಎಂದು ತನಿಕೆಯಿಂದ ತಿಳಿಯಬೇಕಿದೆ.

You may also like