Home » Bengaluru : ಲಿಂಗಾಯತರನ್ನು ನಿಂದಿಸಿದ ಯೂಟ್ಯೂಬರ್ – ಕೇಸ್ ದಾಖಲು!!

Bengaluru : ಲಿಂಗಾಯತರನ್ನು ನಿಂದಿಸಿದ ಯೂಟ್ಯೂಬರ್ – ಕೇಸ್ ದಾಖಲು!!

0 comments

Bengaluru : ಲಿಂಗಾಯತರ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ ಇಂದು ಆರೋಪಿಸಿ ಖ್ಯಾತ ಯೌಟ್ಯೂಬರ್ ಮೇಲೆ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೌದು, ಕರಣ್‌ ಎಂಬಾತ ತನ್ನ ಯುಟ್ಯೂಬ್‌ ಚಾನಲ್‌ನಲ್ಲಿ ಒಂದು ರ್‍ಯಾಪರ್‌ ಹಾಡು ಹಾಡಿದ್ದು, ಅದರಲ್ಲಿ ಲಿಂಗಾಯತ ಸಮುದಾಯಕ್ಕೆ ಸಂಬಂಧಿಸಿದ ಪದ ಬಳಕೆ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಹೀಗಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಬಿ.ಆರ್‌.ನವೀನ್‌ ಕುಮಾರ್‌ ನೀಡಿದ ದೂರಿನ ಮೇರೆಗೆ ಕರಣ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

You may also like