Home » Ullala: ರೈಲಿನಲ್ಲಿ ಪ್ರಯಾಣಿಸುವಾಗ ಹೃದಯಘಾತ – ಗ್ರಾ. ಪಂ ಸದಸ್ಯ ಸಾವು

Ullala: ರೈಲಿನಲ್ಲಿ ಪ್ರಯಾಣಿಸುವಾಗ ಹೃದಯಘಾತ – ಗ್ರಾ. ಪಂ ಸದಸ್ಯ ಸಾವು

0 comments

Ullala: ರೈಲಿನಲ್ಲಿ ಪ್ರಯಾಣಿಸುವಾಗ ಉಳ್ಳಾಲದ ಮುನ್ನುರು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ.

ಹೌದು, ದಿಲ್ಲಿಯಿಂದ ಮಂಗಳೂರು ಕಡೆ ರೈಲಿನಲ್ಲಿ ವಾಪಸಾಗುತ್ತಿದ್ದಾಗ ಹೃದಯಾಘಾತಕ್ಕೀಡಾಗಿ ಮುನ್ನೂರು ಗ್ರಾಮ ಪಂಚಾಯತ್‌ ಸದಸ್ಯ, ಕುತ್ತಾರು ಮದನಿನಗರ ನಿವಾಸಿ ಅಬ್ದುಲ್‌ ಅಝೀಝ್ ಆರ್‌.ಕೆ.ಸಿ. (42) ಮೃತಪಟ್ಟ ಘಟನೆ ಸಂಭವಿಸಿದೆ. ಮಾ. 5ರಂದು ಈ ಘಟನೆ ನಡೆದಿದೆ.

ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಅಬ್ದುಲ್ ಅವರು ವ್ಯವಹಾರಗಳ ನಿಮಿತ್ತ ದೆಹಲಿಗೆ ತೆರಳಿದ್ದರು. ಮರಳುವಾಗ ಅಂಕೋಲಾ ಸಮೀಪ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಮುಂದಿನ ನಿಲ್ದಾಣ ಕುಮಟಾದಲ್ಲಿ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ಅದಾಗಲೇ ಅಬ್ದುಲ್‌ ಅಝೀಝ್ ಮೃತಪಟ್ಟಿದ್ದರು. ಕಾಂಗ್ರೆಸ್‌ನ ಗ್ರಾಮ ಸಮಿತಿ ಅಧ್ಯಕ್ಷರಾಗಿದ್ದ ಅವರು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದರು.

You may also like