Karnataka Budget 2025-26: ಸಿಎಂ ಸಿದ್ದರಾಮಯ್ಯ ಅವರು ಇಂದು ಶುಕ್ರವಾರ 2025-26 ನೇ ಸಾಲಿನ 16ನೇ ಬಜೆಟ್ ಮಂಡನೆ ಮಾಡುತ್ತಿದ್ದು, ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡನೆ ನಡೆಯುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಸಾಕಷ್ಟು ನಿರೀಕ್ಷೆಗಳು ಇದೆ.
ಎಸ್ಸಿ, ಎಸ್ಟಿ ಸಮುದಾಯಗಳ ಗುತ್ತಿಗೆದಾರರಿಗೆ 2 ಕೋಟಿ ರೂಪಾಯಿವರೆಗಿನ ಕಾಮಗಾರಿಗಳಲ್ಲಿ ಗುತ್ತಿಗೆ ಮೀಸಲಾತಿ ನೀಡಲಾಗುವುದು, ಎಸ್ಸಿಪಿ ಟಿಎಸ್ಪಿ ಯೋಜನೆಗೆ 42018 ಕೋಟಿ ರೂ. ಮೀಸಲು ಇಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.
ನೀರಾವರಿ ಯೋಜನೆಗಳದ ಎತ್ತಿನ ಹೊಳೆ ಯೋಜನೆಗೆ ರಾಜ್ಯ ಸರಕಾರ 553 ಕೋಟಿ ರೂ. ಮೀಸಲಿಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಮಧುಗಿರಿ 45, ಕೊರಟಗೆರೆಯಲ್ಲಿ 62 ಕೆರೆ ತುಂಬಿಸುವ ಗುರಿ, ಅಂತರ್ಜಲ ಹೆಚ್ಚಿಸಲು ಯೋಜನೆ ಅನುಷ್ಠಾನ ಮಾಡಲಾಗುವುದು. 1080 ಕೋಟಿ ವೆಚ್ಚದಲ್ಲಿ ವೃಷಭಾವತಿ ವ್ಯಾಲಿ ಯೋಜನೆ ಜಾರಿ.
ಕರ್ನಾಟಕದಲ್ಲಿ ಹೊಸದಾಗಿ 500 ಪಬ್ಲಿಕ್ ಶಾಲೆ ಪ್ರಾರಂಬಿಸುವುದಾಗಿ ಸಿಎಂ ಘೋಷಣೆ. ಬೆಂಗಳೂರು ಟನಲ್ ರಸ್ತೆಗೆ 40 ಸಾವಿರ ಕೋಟಿ. ರೂ ಯೋಜನೆ ಹಂಚಿಕೆ ಮಾಡಿದ್ದಾರೆ.
ರಾಜ್ಯ ಸರಕಾರಿ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದಾಗಿ ಸಿಎಂ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.
