Gangavati: ಮಗುವಿನ ಅನಾರೋಗ್ಯ ಕಡಿಮೆ ಆಗುತ್ತದೆ ಎನ್ನುವ ನಂಬಿಕೆಯಿಂದ ತಾಯಿಯೋರ್ವಳು ತನ್ನ ಏಳು ತಿಂಗಳ ಮಗುವಿಗೆ ಅಗರಬತ್ತಿಯಿಂದ ಸುಟ್ಟು ಕೈ ಚಿಕಿತ್ಸೆ ಮಾಡಿದ ಪರಿಣಾಮ ಮಗು ಮೃತಪಟ್ಟ ಘಟನೆ ಕನಕಗಿರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ತಾಯಿಯ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗುವಿನ ಮರಣೋತ್ತರ ಶವ ಪರೀಕ್ಷೆ ಮಾಡಿದ ವೈದ್ಯರು ಸುಟ್ಟಗಾಯಗಳಿಂದ ನಂಜಾಗಿ ಮಗು ಸಾವನ್ನಪ್ಪಿದೆ ಎಂದು ಕಂಡು ಕೊಂಡಿದ್ದಾರೆ. ಈ ಕುರಿತು ಮರಣೋತ್ತರ ಪರೀಕ್ಷೆಯ ವರದಿಯನ್ನೂ ನೀಡಿದ್ದಾರೆ. ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಶಾಂತ್ ಎಂಬುವವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲು ಮಾಡಲಾಗಿದೆ.
2024, ನವೆಂಬರ್‌ನಲ್ಲಿ ಮಗುವಿಗೆ ಅನಾರೋಗ್ಯ ಉಂಟಾಗಿತ್ತು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದರೂ, ಮಗುವಿನ ಕಾಯಿಲೆ ವಾಸಿಯಾಗಿರದ ಕಾರಣ, ಮಗುವಿಗೆ ಅಗರಬತ್ತಿ ಬೆಂಕಿಯಿಂದ ಬಿಸಿ ಮಾಡಿದರೆ ಕಾಯಿಲೆ ವಾಸಿಯಾಗುತ್ತದೆ ಎಂದು ಯಾರೋ ಹೇಳಿದ್ದನ್ನು ಕೇಳಿದ ತಾಯಿ ಅದರ ಪ್ರಯೋಗ ಮಾಡಿದ್ದು, ಇದೀಗ ಮಗು ಸಾವಿಗೀಡಾಗಿದೆ.
