Home » Mangaluru : ಮೊದಲ ‘ವಾಟರ್ ಮೆಟ್ರೋ’ ಮಂಗಳೂರಿನಲ್ಲಿ ಆರಂಭ!! ಏನಿದು ವಾಟರ್ ಮೆಟ್ರೋ?

Mangaluru : ಮೊದಲ ‘ವಾಟರ್ ಮೆಟ್ರೋ’ ಮಂಗಳೂರಿನಲ್ಲಿ ಆರಂಭ!! ಏನಿದು ವಾಟರ್ ಮೆಟ್ರೋ?

0 comments

Mangaluru : ಕರಾವಳಿಯ ಮೊದಲ ವಾಟರ್ ಮೆಟ್ರೋ ಯೋಜನೆಯನ್ನು ಸರ್ಕಾರ ಮಂಗಳೂರಿನಲ್ಲಿ ಪ್ರಾರಂಭಿಸಲು ತೀರ್ಮಾನಿಸಿದೆ.

ಹೌದು, ಈ ಬಾರಿ ಸರ್ಕಾರ ತನ್ನ ಬಜೆಟ್ ನಲ್ಲಿ ಕರಾವಳಿ ಭಾಗಕ್ಕೆ ಹಲವು ಬರಪೂರ ಕೊಡುಗೆಗಳನ್ನು ನೀಡಿದೆ. ಅದರಲ್ಲಿ ವಾಟರ್ ಮೆಟ್ರೋ ಯೋಜನೆ ಕೂಡ ಒಂದು.

ಏನಿದು ವಾಟರ್‌ ಮೆಟ್ರೋ?

ಸಮುದ್ರದ ನಡುವೆ ಇರುವ ವಿವಿಧ ಪ್ರದೇಶಗಳನ್ನು ಸಂಪರ್ಕಿಸಲು ಎಲೆಕ್ಟ್ರಿಕ್‌- ಹೈಬ್ರಿಡ್‌ ಫೆರಿಗಳನ್ನು ಬಳಕೆ ಮಾಡುವುದೇ ವಾಟರ್‌ ಮೆಟ್ರೋ ಯೋಜನೆಯಾಗಿದೆ. ಇದು ಸರಕಾರದಿಂದ ನಿರ್ವಹಿಸಲ್ಪಡುತ್ತದೆ.

ಇನ್ನೂ ವಾಟರ್‌ ಮೆಟ್ರೋದ ಜತೆಗೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೂಸ್‌ ಯೋಜನೆಯನ್ನೂ ಘೋಷಿಸಲಾಗಿದೆ. ಸಮುದ್ರ ಮತ್ತು ರಾಷ್ಟ್ರೀಯ ಜಲಮಾರ್ಗಗಳಲ್ಲಿ ಸರಕು ಮತ್ತು ಪ್ರಯಾಣಿಕರ ಚಲನೆಯನ್ನು ಉತ್ತೇಜಿಸುವ ಕೋಸ್ಟಲ್‌ ಬರ್ತ್‌ ಯೋಜನೆಯನ್ನೂ ಘೋಷಣೆ ಮಾಡಲಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಜಲಸಾರಿಗೆ ಕ್ಷೇತ್ರದಲ್ಲಿ ಭಾರಿ ಅಭಿವೃದ್ಧಿಯಾಗುವ ಸಾಧ್ಯತೆಗಳಿವೆ.

You may also like