6
Railway: ರೈಲ್ವೆ ಇಲಾಖೆಯು ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಕಾನೂನುಗಳನ್ನು ಮಾಡಿದೆ. ರೈಲಿನಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಾನೂನುಗಳನ್ನು ವಿಶೇಷವಾಗಿ ಮಾಡಲಾಗಿದೆ.
ಭಾರತೀಯ ರೈಲ್ವೆ (Railway) ಕಾಯ್ದೆ 1981 ರ ಸೆಕ್ಷನ್ 139 ರ ಪ್ರಕಾರ, ಟಿಕೆಟ್ ಇಲ್ಲದೆ ಪ್ರಯಾಣಿಸುವ ಮಹಿಳೆಯರನ್ನು ಟಿಕೆಟ್ ಪರೀಕ್ಷಕರು ಬಲವಂತವಾಗಿ ಇಳಿಸುವ ಹಾಗಿಲ್ಲ. ದಂಡ ಪಾವತಿಸುವ ಮೂಲಕ ಪ್ರಯಾಣ ಮುಂದುವರಿಸಬಹುದು. ಮಹಿಳೆಯನ್ನು ಇಳಿಸಬೇಕಾದರೆ ಮಹಿಳಾ ಪೊಲೀಸ್ ಅಧಿಕಾರಿ ಇರಬೇಕು. 12 ವರ್ಷದೊಳಗಿನ ಹುಡುಗ, ತಾಯಿಯೊಂದಿಗೆ ಮಹಿಳಾ ವರ್ಗದಲ್ಲಿ ಪ್ರಯಾಣಿಸಬಹುದು. ಸೇನಾ ಸಿಬ್ಬಂದಿಗೆ ಮಹಿಳಾ ವರ್ಗಕ್ಕೆ ಪ್ರವೇಶವಿಲ್ಲ. ದೂರದ ಪ್ರಯಾಣದಲ್ಲಿ ಸ್ವೀಪರ್ ಮತ್ತು ಎಸಿ ಮೂರನೇ ವರ್ಗದಲ್ಲಿ 6 ಆಸನಗಳನ್ನು ಕಾಯ್ದಿರಿಸಬೇಕು. ಮಹಿಳೆಯರ ಸುರಕ್ಷತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
