Home » NASA: ಸುನಿತಾ ವಿಲಿಯಮ್ಸ್ ಭೂಮಿಗಿಳಿಯುವ ದಿನಾಂಕ ಘೋಷಿಸಿದ NASA

NASA: ಸುನಿತಾ ವಿಲಿಯಮ್ಸ್ ಭೂಮಿಗಿಳಿಯುವ ದಿನಾಂಕ ಘೋಷಿಸಿದ NASA

0 comments

NASA: ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಕಳೆದ ಹಲವು ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದಾರೆ. 8 ದಿನಗಳ ಗಗನಯಾನಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್ ಹಲವು ತಾಂತ್ರಿಕ ಕಾರಣಗಳಿಂದಾಗಿ ಮರಳಿ ಭೂಮಿಗೆ ಬರಲಾಗಿಲ್ಲ. ಆದರೆ ಈಗ ಸುನಿತ ವಿಲಿಯನ್ಸ್ ಅವರು ಭೂಮಿಗಿಳಿಯಲು ಮುಹೂರ್ತ ಫಿಕ್ಸ್ ಆಗಿದ್ದು, ನಾಸಾ ದಿನಾಂಕವನ್ನು ಕೂಡ ಘೋಷಿಸಿದೆ ಎನ್ನಲಾಗಿದೆ.

ಹೌದು, ಕೆಲವೇ ಕೆಲವು ದಿನಗಳವರೆಗೆ ಮಾತ್ರ ಎಂದು ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತ ವಿಲಿಯಮ್ಸ್ ಅವರು ಬರೋಬ್ಬರಿ ಒಂಬತ್ತು ತಿಂಗಳಿನಿಂದ ಅಲ್ಲೇ ಸಿಲುಕಿಕೊಂಡಿದ್ದಾರೆ. ಮುಂದಿನ ವಾರ ಸ್ಪೇಸ್‌ಎಕ್ಸ್ ಡ್ರ್ಯಾಗನ್ನಲ್ಲಿ ಉಡಾವಣೆ ಮಾಡಲು ನಾಸಾ ಶುಕ್ರವಾರ ಪರಿಹಾರ ಸಿಬ್ಬಂದಿಗೆ ಅನುಮತಿ ನೀಡಿತು. ಇವರಿಬ್ಬರು ಮಾರ್ಚ್ 16 ರಂದು ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಅಧಿಕಾರಿಗಳು ಖಚಿತಪಡಿಸಿದ್ದಾರೆ.

You may also like