Home » Mangaluru: ಮಾಜಿ ಉಪಮೇಯರ್‌ ಮುಹಮ್ಮದ್‌ ಕುಂಜತ್ತಬೈಲು ಹೃದಯಾಘಾತದಿಂದ ನಿಧನ!

Mangaluru: ಮಾಜಿ ಉಪಮೇಯರ್‌ ಮುಹಮ್ಮದ್‌ ಕುಂಜತ್ತಬೈಲು ಹೃದಯಾಘಾತದಿಂದ ನಿಧನ!

0 comments

Mangaluru: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್‌ ಮುಹಮ್ಮದ್‌ ಕುಂಜತ್ತಬೈಲು (62) ಇಂದು (ಮಾ.8) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಗೆ ಕುಂಜತ್ತಬೈಲ್‌ ಉತ್ತರ ವಾರ್ಡ್‌ನಿಂದ ಜನತಾದಳ ಪಕ್ಷದ ಮೂಲಕ ಒಂದು ಬಾರಿ ಮತ್ತು ಕಾಂಗ್ರೆಸ್‌ನಿಂದ ಎರಡು ಬಾರಿ ಕಾರ್ಪೋರೇಟರ್‌ ಚುನಾಯಿತರಾಗಿದ್ದ ಇವರು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಮತ್ತು ಉಪಮೇಯರ್‌ ಆಗಿ ಕೆಲಸ ನಿರ್ವಹಿಸಿದ್ದರು.

ಮಂಗಳೂರು ಮನಪಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಇವರು ಉಳ್ಳಾಲದ ಸೈಯ್ಯದ್‌ ಮದನಿ ಐಟಿಐಯಲ್ಲಿ ಶಿಕ್ಷಕರಾಗಿದ್ದರು.

You may also like