Home » Chhaava Cinema: ‘ಛಾವಾ’ ಸಿನಿಮಾ ಎಫೆಕ್ಟ್‌; ಚಿನ್ನಕ್ಕಾಗಿ ಜನರ ಹುಡುಕಾಟ!

Chhaava Cinema: ‘ಛಾವಾ’ ಸಿನಿಮಾ ಎಫೆಕ್ಟ್‌; ಚಿನ್ನಕ್ಕಾಗಿ ಜನರ ಹುಡುಕಾಟ!

0 comments

Chhaava Cinema: ‘ಛಾವಾ’ ಚಿತ್ರದಲ್ಲಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ಗಡಿ ಭಾಗದಲ್ಲಿರುವ ಬುರ್ಹಾನ್‌ಪುರದ ಕೋಟೆಯೊಂದು ಚಿನ್ನದ ಗಣಿ ಎಂದು ಬಿಂಬಿತವಾಗಿದ್ದು, ಇದೀಗ ಸ್ಥಳೀಯ ಜನರು ಚಿನ್ನಕ್ಕಾಗಿ ಅಲ್ಲಿ ರಾತ್ರಿ ಹೊತ್ತು ಭೂಮಿ ಅಗೆಯಲು ಪ್ರಾರಂಭಿಸಿದ್ದಾರೆ.

ಛತ್ರಪತಿ ಶಿವಾಜಿಯ ಮಗ ಛತ್ರಪತಿ ಸಂಭಾಜಿ ಜೀವನ ಕುರಿತಾದ ಈ ಚಿತ್ರದಲ್ಲಿ ಬುರ್ಹಾನ್‌ಪುರದ ಸಮೀಪವಿರುವ ಆಸಿರ್‌ಗಢ ಕೋಟೆಯಲ್ಲಿ ನಿಧಿ ಇತ್ತು ಎಂದು ಉಲ್ಲೇಖಿಸಲಾಗಿದೆ. ಈ ಬಳಿಕ ಆಸಿರ್‌ಗಢ ಕೋಟೆ ಸಮೀಪದ ರಸ್ತೆ ನಿರ್ಮಾಣದ ಕಾರ್ಯ ವೇಳೆ ಕಾರ್ಮಿಕರಿಗೆ ಲೋಹದ ನಾಣ್ಯಗಳು ದೊರೆತ ಬಳಿಕ ಇದೀಗ ಸ್ಥಳೀಯರು ಪ್ರತಿನಿತ್ಯ ರಾತ್ರಿ, ಈ ಕೋಟೆಯ ಸುತ್ತಮುತ್ತಲಿನ ಭಾಗಗಳಲ್ಲಿ ಚಿನ್ನ ಹುಡುಕುವ ಸಲುವಾಗಿ ಭೂಮಿ ಅಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಲವರು ನಮಗೂ ಲೋಹದ ನಾಣ್ಯಗಳು ಲಭಿಸಿವೆ ಎಂದಿದ್ದಾರೆ.

ಸಮೀಪವಿರುವ ಆಸಿರ್‌ಗಢ ಕೋಟೆಯಲ್ಲಿ ನಿಧಿ ಇತ್ತು ಎಂದು ಉಲ್ಲೇಖಿಸಲಾಗಿದೆ. ಈ ಬಳಿಕ ಆಸಿರ್‌ಗಢ ಕೋಟೆ ಸಮೀಪದ ರಸ್ತೆ ನಿರ್ಮಾಣದ ಕಾರ್ಯ ವೇಳೆ ಕಾರ್ಮಿಕರಿಗೆ ಲೋಹದ ನಾಣ್ಯಗಳು ದೊರೆತ ಬಳಿಕ ಇದೀಗ ಸ್ಥಳೀಯರು ಪ್ರತಿನಿತ್ಯ ರಾತ್ರಿ, ಈ ಕೋಟೆಯ ಸುತ್ತಮುತ್ತಲಿನ ಭಾಗಗಳಲ್ಲಿ ಚಿನ್ನ ಹುಡುಕುವ ಸಲುವಾಗಿ ಭೂಮಿ ಅಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಲವರು ನಮಗೂ ಲೋಹದ ನಾಣ್ಯಗಳು ಲಭಿಸಿವೆ ಎಂದಿದ್ದು, ಇದೀಗ ದಿನೇದಿನೆ ಚಿನ್ನದ ಹುಡುಕಾಟಕ್ಕೆ ಬರುತ್ತಿರುವ ಜನರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಈ ಕುರಿತು ಜಿಲ್ಲಾಧಿಕಾರಿ ಹರ್ಷ ಸಿಂಗ್‌ ಪ್ರತಿಕ್ರಿಯಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಹಾಗೂ ಭೂಮಿ ಅಗೆಯುವ ವೇಳೆ ಕೆಲವರಿಗೆ ದೊರೆತ ಲೋಹದ ನಾಣ್ಯಗಳು ಹಾಗೂ ಇನ್ನಿತರ ಪುರಾತನ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಲಾಗುವುದು ಎಂದಿದ್ದಾರೆ.

You may also like