Home » Kundapura: ಕುಂದಾಪುರ: ಕುಂದಾಪುರದ ಆನಗಳ್ಳಿ ಹೊಳೆಯಲ್ಲಿ ಮೃತದೇಹ ಪತ್ತೆ!

Kundapura: ಕುಂದಾಪುರ: ಕುಂದಾಪುರದ ಆನಗಳ್ಳಿ ಹೊಳೆಯಲ್ಲಿ ಮೃತದೇಹ ಪತ್ತೆ!

0 comments
Suicide

Kundapura: ಕುಂದಾಪುರ (Kundapura) ನಗರ ಸಮೀಪದ ಆನಗಳ್ಳಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿದೆ.

ತ್ರಾಸಿಯ ನಿವಾಸಿಯಾದ ಸಂದೀಪ್‌ ಪೂಜಾರಿ ದಿನಾಂಕ 07.03.2025 ರಂದು ಮಧ್ಯಾಹ್ನ 12.00 ಗಂಟೆಯ ವೇಳೆಗೆ ಮನೆಯಿಂದ ಬಲೆಯನ್ನು ಹಿಡಿದುಕೊಂಡು ಏಂದಿನಂತೆ ಆರಾಟೆ ಬಳಿಯ ಮೂವತ್ತುಮುಡಿ ಸೇತುವೆ ಬಳಿಯ ನದಿಯಲ್ಲಿ ಮೀನು ಹಿಡಿಯಲು ಸಂದೀಪ್‌ ತೆರಳಿದ್ದು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದರು.

ಕಳೆದ ಎರಡು ದಿನಗಳಿಂದ ನಾಪತ್ತೆಯಾದ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಸಂದೀಪ್‌ ಅವರ ಸಹೋದರ ಸಂತೋಷ ಪೂಜಾರಿ ದೂರು ನೀಡಿದ್ದರು. ಇದೀಗ ಅವರ ಮೃತದೇಹ ಆನಗಳ್ಳಿ ನದಿಯಲ್ಲಿ ಪತ್ತೆಯಾಗಿದ್ದು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like