Viral Video : ಸುಮಾರು 8 ಅಡಿ ಉದ್ದದ ಹೆಬ್ಬಾವನ್ನು ಹಿಡಿದು ಮಕ್ಕಳು ಹಗ್ಗದಂತೆ ಬಳಸುತ್ತಾ ಸ್ಕಿಪ್ಪಿಂಗ್ ಆಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://x.com/clowndownunder/status/1898892150513049705?t=TYkOM1qxp2kFynUAWoV8ig&s=19v
ವಿಡಿಯೋದಲ್ಲಿ ಏನಿದೆ?
ಈ ಘಟನೆ ಆಸ್ಟ್ರೇಲಿಯಾದ ಸೆಂಟ್ರಲ್ ಕ್ವೀನ್ಸ್‌ಲ್ಯಾಂಡ್‌ನ ವೂರಾಬಿಂಡಾ ಎಂಬ ಪಟ್ಟಣದಲ್ಲಿ ನಡೆದಿದ್ದು ಮಕ್ಕಳು ನಗುತ್ತಾ ಹಾವಿನ ಮೇಲೆ ಹಾರುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ, ವಯಸ್ಕರೂ ಅಲ್ಲಿದ್ದಾರೆ. ಚಿತ್ರೀಕರಣ ಮಾಡುವಾಗ ಮಹಿಳೆಯೊಬ್ಬರು ‘ಅದು ಏನು ಎಂದು ತೋರಿಸು’ ಎಂದು ಹೇಳುತ್ತಿದ್ದಾರೆ. ಮಕ್ಕಳು ನಗುತ್ತಾ ಜಿಗಿಯುವುದನ್ನು ಮುಂದುವರಿಸಿದ್ದಾರೆ. ಇಬ್ಬರು ಮಕ್ಕಳು ಹಾವಿನ ಎರಡೂ ಬದಿಗಳನ್ನು ಹಿಡಿದುಕೊಂಡಿದ್ದಾರೆ, ಮತ್ತೊಬ್ಬ ಮಗು ಅದರ ಮೇಲೆ ಹಾರುತ್ತಿದ್ದಾನೆ. ಅದೃಷ್ಟವಶಾತ್ ಆ ಹಾವು ಸತ್ತು ಹೋಗಿದೆ.
ಇನ್ನೂ ವಿಡಿಯೋ ರೆಕಾರ್ಡ್ ಮಾಡುತ್ತಿರುವ ಮಹಿಳೆ ಹಾವನ್ನು ತನಗೆ ತೋರಿಸುವಂತೆ ಮಕ್ಕಳನ್ನು ಕೇಳುತ್ತಾಳೆ. ಈ ವೇಳೆ ಮಕ್ಕಳು ಹಾವನ್ನು ನೆಲದ ಮೇಲೆ ಇಡುತ್ತಾರೆ. ಮಕ್ಕಳು ಸತ್ತ ಹೆಬ್ಬಾವನ್ನು ಹಗ್ಗವಾಗಿ ಬಳಸಿದ್ದು, ಹುಡುಗರಲ್ಲಿ ಒಬ್ಬ ಅದು ಕಪ್ಪು ತಲೆಯ ಹಾವು ಎಂದು ಹೇಳುತ್ತಾನೆ. ಮಕ್ಕಳಿಗೆ ಆ ಹಾವು ಎಲ್ಲಿಂದ ಸಿಕ್ಕಿತು? ಅಥವಾ ಅವರು ಹಾವನ್ನು ಹಿಡಿದಾಗ ಅದು ಜೀವಂತವಾಗಿತ್ತೇ ಎಂಬುದು ಸ್ಪಷ್ಟವಾಗಿಲ್ಲ. ಘಟನೆಯ ವಿಡಿಯೋ ಈಗಾಗಲೇ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಇದನ್ನು ಟೀಕಿಸುತ್ತಿದ್ದಾರೆ.
