Home » Shabarimala: ದೇವರ ದರ್ಶನ ಮಾರ್ಗದಲ್ಲಿ ಬದಲಾವಣೆ!

Shabarimala: ದೇವರ ದರ್ಶನ ಮಾರ್ಗದಲ್ಲಿ ಬದಲಾವಣೆ!

0 comments

Shabarimala: ಶಬರಿಮಲೆಗೆ ಭೇಟಿ ನೀಡುವ ಅಯ್ಯಪ್ಪ ಭಕ್ತರಿಗೆ ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ಭಕ್ತರ ಬಹುಕಾಲದ ಬೇಡಿಕೆಯನ್ನು ಪರಿಗಣನೆ ಮಾಡಿದೆ. ಅದೇನೆಂದರೆ ಶಬರಿಮಲೆಯಲ್ಲಿ ದರ್ಶನ ಮಾರ್ಗದಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧಾರ ಮಾಡಿದೆ. ಭಕ್ತರು ಪವಿತ್ರವಾದ 18 ಮೆಟ್ಟಿಲುಗಳನ್ನು ಹತ್ತಿದ ತಕ್ಷಣವೇ ದೇವರ ದರ್ಶನ ಭಾಗ್ಯ ದೊರೆಯಲಿದೆ.

18 ಪವಿತ್ರ ಮೆಟ್ಟಿಲುಗಳನ್ನು ಹತ್ತಿದ ಭಕ್ತರಿಗೆ ದೇವರ ದರ್ಶನಕ್ಕೆ ಇನ್ನೂ ದೂರ ಹೋಗಬೇಕಿತ್ತು. ಆದರೆ ಟಿಡಿಬಿ ತೆಗೆದುಕೊಂಡಿರುವ ಈ ನಿರ್ಧಾರವು ಭಕ್ತರಿಗೆ ದೇವರ ದರ್ಶನವು ನೇರವಾಗಿ ಪಡೆಯುವಂತಾಗಿದೆ. ದರ್ಶನಕ್ಕೆ ಕಾಯುವ ಸಮಯ ಕೂಡಾ ಕಡಿಮೆಯಾಗಲಿದೆ.

ಮಾ.15 ರಂದು ಆರಂಭವಾಗುವ ಮಾಸಿಕ ಪೂಜೆಯ ಸಮಯದಲ್ಲಿ ಈ ಬದಲಾವಣೆ ಕುರಿತು ಪ್ರಾಯೋಗಿಕ ಜಾರಿಗೆ ಮಾಡಲಾಗುವುದು. ವಿಷು ಪೂಜೆಯೂ ಈ ಸಂದರ್ಭದಲ್ಲಿ ಇದ್ದು ಈ ವ್ಯವಸ್ಥೆಯನ್ನು ಮುಂದುವರೆಸಲಾಗುವುದು ಎಂದು ಟಿಡಿಬಿ ತಿಳಿಸಿದೆ. ಈ ಬದಲಾವಣೆಯಿಂದ ಶಬರಿಮಲೆಗೆ ಭೇಟಿ ನೀಡುವ ಭಕ್ತರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಟಿಡಿಬಿ ಆಶಯ ವ್ಯಕ್ತಪಡಿಸಿದೆ.

You may also like