Home » Robbery: ಹಾಡಹಗಲೇ ತನಿಷ್ ಆಭರಣ ಮಳಿಗೆಯಿಂದ 25 ಕೋಟಿ ರೂ. ದರೋಡೆ!

Robbery: ಹಾಡಹಗಲೇ ತನಿಷ್ ಆಭರಣ ಮಳಿಗೆಯಿಂದ 25 ಕೋಟಿ ರೂ. ದರೋಡೆ!

by ಕಾವ್ಯ ವಾಣಿ
0 comments

Robbery: ಬಿಹಾರದ ಅರ್ರ ದಲ್ಲಿರುವ ತನಿಷ್ಕ ಆಭರಣ ಶೋರೂಂ ಮೇಲೆ ದರೋಡೆಕೋರರು ನುಗ್ಗಿ 25 ಕೋಟಿ ರೂ. ಮೌಲ್ಯದ ಆಭರಣಗಳನ್ನು ದೋಚಿದ್ದಾರೆ (Robbery) .

ಅರ್ರ ಪೊಲೀಸ್‌ ಠಾಣೆ ಪ್ರದೇಶದಲ್ಲಿರುವ ಗೋಪಾಲಿ ಚೌಕ್‌ ಶಾಖೆಯಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಶೋರೂಂ ವ್ಯವಸ್ಥಾಪಕ ಕುಮಾರ್ ಮೃತ್ಯುಂಜಯ್ ಪ್ರಕಾರ, ನಗದು ಜೊತೆಗೆ, ದರೋಡೆಕೋರರು ಚಿನ್ನದ ಸರಗಳು, ನೆಕ್ಲೀಸ್‌ಗಳು, ಬಳೆಗಳು ಮತ್ತು ಕೆಲವು ವಜ್ರಗಳು ಸೇರಿದಂತೆ ಹಲವಾರು ಬೆಲೆಬಾಳುವ ವಸ್ತುಗಳನ್ನು ದೋಚಿದ್ದು, ಒಟ್ಟು 25 ಕೋಟಿ ರೂ. ಮೌಲ್ಯದ ಆಭರಣಗಳನ್ನು ಲೂಟಿ ಮಾಡಲಾಗಿದೆ.

ಶೋರೂಂನ ಇಬ್ಬರು ಕಾರ್ಯನಿರ್ವಾಹಕರು ದಾಳಿಯಲ್ಲಿ ಗಾಯಗೊಂಡಿದ್ದಾರೆ ಮತ್ತು ದರೋಡೆಕೋರರು ಅವರ ತಲೆಗೆ ರಿವಾಲ್ವರ್‌ಗಳಿಂದ ಹೊಡೆದಿದ್ದಾರೆ. ದರೋಡೆಯಲ್ಲಿ ಕನಿಷ್ಠ ಎಂಟು ದರೋಡೆಕೋರರು ಭಾಗಿಯಾಗಿದ್ದಾರೆ ಎಂದು ಕುಮಾರ್ ತಿಳಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಲ್ಲಿ 8-9 ಜನರು ಒಳಗೆ ನುಗ್ಗಿ ಕಾವಲುಗಾರರು ಮತ್ತು ಶೋರೂಂ ಒಳಗೆ ಇದ್ದ ನೌಕರರನ್ನು ಬೆದರಿಸಿದ್ದಾರೆ. ನಂತರ ದರೋಡೆಕೋರರು ಕೌಂಟರ್‌ನಲ್ಲಿದ್ದ ಹಣವನ್ನು ಮತ್ತು ಹಲವಾರು ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

You may also like