Uttar Pradesh: ಎಲ್ಲಿಗಾದರೂ ಹೋಗುವಾಗ ಬೆಕ್ಕು ಅಡ್ಡ ಬಂದರೆ ಹೋದ ಕೆಲಸ ಆಗುವುದಿಲ್ಲ ಎನ್ನುವ ಮಾತೊಂದಿದೆ. ಇದು ನಂಬಿಕೆಯೋ ಮೂಢನಂಬಿಕೆಯೋ ಗೊತ್ತಿಲ್ಲ. ಆದರೆ ಇದನ್ನು ನಂಬುವವರು ಕೂಡಾ ಇದ್ದಾರೆ. ಆದರೆ ಇಲ್ಲೋರ್ವ ಮಹಿಳೆ ಬೆಕ್ಕು ಅಡ್ಡ ಬಂತು ಎಂದು ಬೆಕ್ಕನ್ನೇ ಸುಟ್ಟು ಹಾಕಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬರು ಫ್ರೆಂಡ್ಸ್ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ದಾರಿಗೆ ಅಡ್ಡಲಾಗಿ ಬೆಕ್ಕು ಬಂದ ಕಾರಣ ಬೆಕ್ಕು ಅಡ್ಡ ಬಂದಿದ್ದಕ್ಕೆ ಕೋಪಗೊಂಡ ಮಹಿಳೆ ಬೆಕ್ಕನ್ನು ಹಿಡಿದು ಜೀವಂತವಾಗಿ ಸುಟ್ಟು ಹಾಕಿದ್ದಾಳೆ. ಈ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ.
ಬೈಕ್ಕು ಅಡ್ಡಬಂದಿದ್ದಕ್ಕೆ ಮಹಿಳೆ ಹಾಗೂ ಆಕೆಯ ಸ್ನೇಹಿತರ ಗುಂಪು ಬೈಕನ್ನು ಬೆನ್ನಟ್ಟಿ ಹೋಗಿ ಹಿಡಿದುಕೊಂಡು ಬಂದಿದ್ದು, ಮನಬಂದಂತೆ ಥಳಿಸಿ ಪೆಟ್ರೋಲ್ ಸುರಿದು ಬೆಕ್ಕನ್ನು ಅಮಾನುಷವಾಗಿ ಸುಟ್ಟುಹಾಕಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ.
ಪೊಲೀಸರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಾ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
