Home » Sandalwood News: ಸ್ಯಾಂಡಲ್‌ವುಡ್‌ನ ಮತ್ತಿಬ್ಬರು ನಟಿಯರಿಗೆ ಶಾಕ್‌ ನೀಡಿದ ಸಿಸಿಬಿ

Sandalwood News: ಸ್ಯಾಂಡಲ್‌ವುಡ್‌ನ ಮತ್ತಿಬ್ಬರು ನಟಿಯರಿಗೆ ಶಾಕ್‌ ನೀಡಿದ ಸಿಸಿಬಿ

0 comments

Sandalwood News: ನಟಿ ರನ್ಯಾ ರಾವ್‌ ಪ್ರಕರಣ ಮುನ್ನೆಲೆಯಲ್ಲಿರುವಾಗಲೇ ಇದೀಗ ಸ್ಯಾಂಡಲ್‌ವುಡ್‌ನ ಇನ್ನಿಬ್ಬರು ನಟಿಯರಿಗೆ ಸಿಸಿಬಿ ಶಾಕ್‌ ನೀಡಿದೆ. ನಟಿ ಸಂಜನಾ ಮತ್ತು ರಾಗಿಣಿ ಎಫ್‌ಐಆರ್‌ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಿಸಿಬಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದೆ.

ನಟಿಯರು ಸಿಸಿಬಿ ಡ್ರಗ್ಸ್‌ ಕೇಸಿನಲ್ಲಿ ಎಫ್‌ಐಆರ್‌ ರದ್ದು ಮಾಡುವಂತೆ ಹೈಕೋರ್ಟ್‌ ಮೊರೆ ಹೋಗಿದ್ದರು. ಅನಂತರ ಹೈಕೋರ್ಟ್‌ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಹಾಗೂ ವೀರೇನ್‌ ಖನ್ನಾನ ಎಫ್‌ಐಆರ್‌ ರದ್ದು ಮಾಡಿತ್ತು.

ಇದೀಗ ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯ ಸಮ್ಮತಿಯ ಬಳಿಕ ಸುಪ್ರೀಂಗೆ ಸಿಸಿಬಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಕಾನೂನು ಇಲಾಖೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗಲು ಸಮ್ಮತಿ ನೀಡಿತ್ತು. ನಂತರ ಗೃಹ ಇಲಾಖೆಯಿಂದ ಅನುಮತಿ ಮೇರೆಗೆ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಾಗಿದೆ. ಹೈಕೋರ್ಟ್‌ ಆದೇಶ ರದ್ದುಗೊಳಿಸುವಂತೆ ಸಿಸಿಬಿ, ಸುಪ್ರೀಂ ಮೊರೆ ಹೋಗಿದೆ.

You may also like