Home » NASA: ಸುನಿತಾ ವಿಲಿಯಮ್ಸ್ ಗೆ ನಿರಾಸೆ – ಭೂಮಿಗೆ ಕರೆತರುವ ಪ್ರಯತ್ನ ಮತ್ತೆ ವಿಫಲ!!

NASA: ಸುನಿತಾ ವಿಲಿಯಮ್ಸ್ ಗೆ ನಿರಾಸೆ – ಭೂಮಿಗೆ ಕರೆತರುವ ಪ್ರಯತ್ನ ಮತ್ತೆ ವಿಫಲ!!

by ಹೊಸಕನ್ನಡ
0 comments

NAASA: ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಕಳೆದ ಹಲವು ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದಾರೆ. 8 ದಿನಗಳ ಗಗನಯಾನಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್ ಹಲವು ತಾಂತ್ರಿಕ ಕಾರಣಗಳಿಂದಾಗಿ ಮರಳಿ ಭೂಮಿಗೆ ಬರಲಾಗಿಲ್ಲ. ಕೆಲವು ದಿನಗಳ ಹಿಂದಷ್ಟೇ ನಾಸ ಸುನಿತ ವಿಲಿಯಂಸ್ ಅವರನ್ನು ಭೂಮಿಗೆ ಮರಳಿ ಕರೆತರುವ ದಿನಾಂಕವನ್ನು ಘೋಷಿಸಿತ್ತು. ಆದರೆ ಇದೀಗ ಮತ್ತೆ ಸುನಿತಾ ಭೂಮಿಗೆ ಬರುವುದು ತಡವಾಗಲಿದೆ ಎಂಬ ಮಾಹಿತಿ ಬಂದದಾಗಿದೆ.

 

ಹೌದು, ಕೆಲವೇ ಕೆಲವು ದಿನಗಳವರೆಗೆ ಮಾತ್ರ ಎಂದು ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತ ವಿಲಿಯಮ್ಸ್ ಅವರು ಬರೋಬ್ಬರಿ ಒಂಬತ್ತು ತಿಂಗಳಿನಿಂದ ಅಲ್ಲೇ ಸಿಲುಕಿಕೊಂಡಿದ್ದಾರೆ. ಆದ್ರೆ ಸ್ಪೇಸ್‌ಎಕ್ಸ್ ಡ್ರ್ಯಾಗನ್ನಲ್ಲಿ ಉಡಾವಣೆ ಮಾಡಲು ನಾಸಾ ಶುಕ್ರವಾರ ಪರಿಹಾರ ಸಿಬ್ಬಂದಿಗೆ ಅನುಮತಿ ನೀಡಿದ್ದು ಇವರಿಬ್ಬರು ಮಾರ್ಚ್ 16 ರಂದು ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಅಧಿಕಾರಿಗಳು ಖಚಿತಪಡಿಸಿದ್ದರು. ಅದರೀಗ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಬುಚ್ ವಿಲ್ಮೋರ್ (Butch Wilmore) ಅವರನ್ನು ಭೂಮಿಗೆ ಮರಳಿ ಕರೆತರುವ ಯೋಜನೆಗೆ ಮತ್ತೆ ಅಡ್ಡಿಯಾಗಿದೆ.

 

ಹೊಸ ತಂಡವು ಅವರನ್ನು ಬದಲಿಸಲು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಬೇಕಿದೆ. ಆದರೆ ಫಾಲ್ಕನ್ ರಾಕೆಟ್‌ನ ಉಡಾವಣೆಗೆ ಕೆಲವೇ ಗಂಟೆಗಳು ಇರುವಾಗ ಪ್ರಮುಖ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಈಗಾಗಲೇ ಕ್ಯಾಪ್ಸುಲ್‌ನಲ್ಲಿ ಕುಳಿತಿದ್ದ ನಾಲ್ವರು ಗಗನಯಾತ್ರಿಗಳು ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿದ್ದರು. ಕ್ಷಣಗಣನೆಗೆ ಒಂದು ಗಂಟೆಗಿಂತ ಕಡಿಮೆ ಸಮಯ ಇರುವಾಗ ಉಡಾವಣೆಯನ್ನು ರದ್ದುಗೊಳಿಸುವ ನಿರ್ಧಾರ ಬಂದಿತು. ಸ್ಪೇಸ್‌ಎಕ್ಸ್ ಕಂಪನಿಯು ಉಡಾವಣೆಯನ್ನು ರದ್ದುಗೊಳಿಸಿದ್ದರೂ, ಹೊಸ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.

You may also like