Home » Punjab: ಪಾರ್ಕಿಂಗ್‌ ವಿಚಾರದಲ್ಲಿ ಹಲ್ಲೆ, ವಿಜ್ಞಾನಿ ಸಾವು!

Punjab: ಪಾರ್ಕಿಂಗ್‌ ವಿಚಾರದಲ್ಲಿ ಹಲ್ಲೆ, ವಿಜ್ಞಾನಿ ಸಾವು!

0 comments

Punjab: ಪಾರ್ಕಿಂಗ್‌ ವಿಷಯಕ್ಕೆ ಸಂಬಂಧಪಟ್ಟಂತೆ ನೆರೆಹೊರೆಯವರ ಜೊತೆ ಜಗಳ ನಡೆದಿದ್ದು, ಮೊಹಾಲಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಎಜುಕೇಶನ್‌ ಆಂಡ್‌ ರಿಸರ್ಚ್‌ (IISER) ನಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿಯೋರ್ವರು ಜೀವ ಕಳೆದುಕೊಂಡಿರುವ ಘಟನೆ ನಡೆದಿದೆ.

ಅಭಿಷೇಕ್‌ ಸ್ವರ್ಣಕರ್‌ (39) ಮೃತ ವ್ಯಕ್ತಿ.

ಜಾರ್ಖಂಡ್‌ ಮೂಲತಃವರಾದ ಅಭಿಷೇಕ್‌ ಅವರು IISER ನಲ್ಲಿ ಕೆಲಸ ಮಾಡುತ್ತಿದ್ದು, ಸೆಕ್ಟರ್‌ 67 ರಲ್ಲಿ ಬಾಡಿಗೆ ಮನೆಯಲ್ಲಿ ಪೋಷಕರ ಜೊತೆ ವಾಸವಾಗಿದ್ದರು. ಮಂಗಳವಾರ ರಾತ್ರಿ ಕೆಲಸ ಮುಗಿಸಿ ಬಂದ ಇವರು ಮನೆಯ ಹೊರಭಾಗದ ರಸ್ತೆಯಲ್ಲಿ ಬೈಕ್‌ ನಿಲ್ಲಿಸಿದ್ದು, ಇದಕ್ಕೆ ಪಕ್ಕದ ಮನೆಯ ವ್ಯಕ್ತಿ ಬೈಕ್‌ ನಿಲ್ಲಿಸಿದ್ದ ವಿಚಾರದಲ್ಲಿ ತಗಾದೆ ತೆಗೆದಿದ್ದು,‌ ಅಭಿಏಕ್‌ ಹೊಟ್ಟೆಗೆ ನೆರೆಮನೆಯ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಅಷ್ಟರಲ್ಲಿ ಅಭಿಷೇಕ್‌ ಮನೆಯವರು ಹೊರಗೆ ಬಂದಿದ್ದು, ನೆರೆಹೊರೆಯವರು ಜಗಳ ಬಿಡಿಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಅಭಿಷೇಕ್‌ ಎದ್ದು ನಿಂತು ಕೂಡಲೇ ನಿತ್ರಾಣಗೊಂಡು ರಸ್ತೆ ಮತ್ತೆ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆತನನ್ನು ಪಕ್ಕದ ಆಸ್ಪತ್ರೆಗೆ ದಾಖಲು ಮಾಡಿದರೂ, ಪರಿಶೀಲನೆ ಮಾಡಿದ ವೈದ್ಯರು ಅಭಿಷೇಕ್‌ ಮೃತಪಟ್ಟಿರುವುದಾಗಿ ಘೋಷಿಸಿದರು.

ಅಭಿಷೇಕ್‌ ಇತ್ತೀಚೆಗೆ ಮೂತ್ರಪಿಂಡ ಕಸಿಗೆ ಒಳಗಾಗಿದ್ದರು. ಅವರ ಸಹೋದರಿ ತನ್ನ ಒಂದು ಮೂತ್ರಪಿಂಡವನ್ನು ಸಹೋದರನಿಗೆ ದಾನ ಮಾಡಿದ್ದರು. ಹಾಗಾಗಿ ಡಯಾಲಿಸಿಸ್‌ಗೆ ಒಳಗಾಗಿದ್ದರು. ಪೆಟ್ಟು ಅದೇ ಜಾಗಕ್ಕೆ ಬಿದ್ದಿದ್ದರಿಂದ ಸ್ಥಳದಲ್ಲೇ ಮೃತ ಹೊಂದಿದ್ದಾರೆ.

 

You may also like