Home » Mangalore: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಪೋಕೋ ಕೇಸಿನಲ್ಲಿ ಬಂಧಿತನಾಗಿದ್ದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

Mangalore: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಪೋಕೋ ಕೇಸಿನಲ್ಲಿ ಬಂಧಿತನಾಗಿದ್ದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

by ಕಾವ್ಯ ವಾಣಿ
0 comments

Mangaluru: ಮಂಗಳೂರು (Mangaluru) ಜೈಲಿನಲ್ಲಿ ಪೋಕ್ಸ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ತನ್ನ ಶಾಲನ್ನೇ ಕಿಟಕಿಗೆ ಕಟ್ಟಿ ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡಿದ್ದಾನೆ.

ಮೂಡುಬಿದ್ರೆ ಠಾಣೆಯಲ್ಲಿ ಪೋಕ್ಸೋ ಕೇಸು ದಾಖಲಾಗಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ ಪ್ರಕಾಶ್ ಗೋಪಾಲ ಮೂಲ್ಯ (50) ಮಾ.11ರಂದು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದು ಮಂಗಳೂರು ಜೈಲು ಸೇರಿದ್ದ. ಆದರೆ ಮಾ. 16 ರಂದು ಜೈಲಿನ ಟಾಯ್ಲೆಟ್ ಒಳಗಡೆಯ ಕಿಟಕಿಗೆ ನೇಣು ಹಾಕಿಕೊಂಡಿದ್ದಾನೆ. ಪೋಕ್ಸೋ ಪ್ರಕರಣದಲ್ಲಿ ಜಾಮೀನು ಸಿಗೋದಿಲ್ಲ. ಯಾರು ಕೂಡ ಜೈಲಿನಿಂದ ಬಿಡಿಸಲು ಬರೋದಿಲ್ಲ ಎಂದು ಮನ ನೊಂದು ಸಾವಿಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.

You may also like