Home » Chamarajanagar: ‘ತಲೆಯಲ್ಲಿ ಕೂದಲಿಲ್ಲ’ ಎಂದು ಕಾಟ ಕೊಡುತ್ತಿದ್ದ ಹೆಂಡತಿ – ಮನನೊಂದು ಗಂಡ ಆತ್ಮಹತ್ಯೆ

Chamarajanagar: ‘ತಲೆಯಲ್ಲಿ ಕೂದಲಿಲ್ಲ’ ಎಂದು ಕಾಟ ಕೊಡುತ್ತಿದ್ದ ಹೆಂಡತಿ – ಮನನೊಂದು ಗಂಡ ಆತ್ಮಹತ್ಯೆ

0 comments

Chamarajanagr: ರಾಜ್ಯದಲ್ಲಿ ಇತ್ತೀಚಿಗೆ ಹೆಂಡತಿಯರ ಕಾಟಕ್ಕೆ ಗಂಡಂದಿರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ವಾರಕ್ಕೆ ಒಂದು ಎಂಬಂತೆ ಈ ರೀತಿಯ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಇದೀಗ ಅಂತದ್ದೇ ಒಂದು ಘಟನೆ ಮತ್ತೆ ಬೆಳಕಿಗೆ ಬಂದಿದ್ದು, ತಲೆಯಲ್ಲಿ ಕೂದಲಿಲ್ಲ ಎಂದು ನಿತ್ಯವೂ ಹೆಂಡತಿ ಕೊಡುತ್ತಿದ್ದ ಕಾಟಕ್ಕೆ ಮನನೊಂದು ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೌದು, ತಲೆಯಲ್ಲಿ ಕೂದಲಿಲ್ಲ ಎನ್ನುವ ಕಾರಣಕ್ಕೆ ಪತ್ನಿ ಪತಿಯನ್ನು ಹೀಯಾಳಿಸಿ ಕಿರುಕುಳ ನೀಡಿದ್ದಾಳೆ ಇದರಿಂದ ಮನನೊಂದು ಪ್ರತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರದ ಗುಡಿಗಾಲದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಪರಶಿವಮೂರ್ತಿ (30) ಎಂದು ತಿಳಿದು ಬಂದಿದೆ.

ಎರಡು ವರ್ಷದ ಹಿಂದೆ ಕಳಕಿಪುರದ ಮಮತಾ ಜೊತೆಗೆ ಪರಮಶಿವಮೂರ್ತಿ ಅವರ ಮದುವೆ ಆಗಿತ್ತು. ಮದುವೆ ಹಳಿಕ ಪರಶಿವಮೂರ್ತಿ ತಲೆಕೂದಲು ಉದುರಿತ್ತು. ಹೊರಗೆ ಹೋದರೆ ನನಗೆ ನಾಚಿಕೆ ಆಗುತ್ತದೆ ಎಲ್ಲರೂ ಅಪಹಾಸ್ಯ ಮಾಡುತ್ತಾರೆ ನನ್ನ ಗಂಡ ಎಂದು ಹೇಳೋಕೆ ಮುಜುಗರ ಆಗುತ್ತದೆ ಎಂದು ಕಿರುಕುಳ ನೀಡಿದ್ದಳು. ಇದೀಗ ಪರಶಿವಮೂರ್ತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

You may also like