Home » Marriage: ಕುಡಿಯುವ ನೀರಿಗಾಗಿ ಜಗಳ; ಮುರಿದು ಬಿದ್ದ ಮದುವೆ!

Marriage: ಕುಡಿಯುವ ನೀರಿಗಾಗಿ ಜಗಳ; ಮುರಿದು ಬಿದ್ದ ಮದುವೆ!

0 comments
Marriage

Chitradurga: ಕುಡಿಯುವ ನೀರಿಗಾಗಿ ಜಗಳ ನಡೆದಿದ್ದು, ಇದರಿಂದ ಮದುವೆಯೇ ಮುರಿದುಬಿದ್ದ ಘಟನೆ ಹಿರಿಯೂರು ನಗರದ ಬೆಂಗಳೂರು ರಸ್ತೆಯಲ್ಲಿರುವ ಬಲಿಜ ಶ್ರೇಯ ಸಮುದಾಯ ಭವನದಲ್ಲಿ ನಡೆದಿದೆ.

ಜಗಳೂರು ಮೂಲದ ಮನೋಜ್‌ ಮತ್ತು ತುಮಕೂರು ಜಿಲ್ಲೆ ಶಿರಾ ಮೂಲದ ಅನಿತ ಎಂಬುವವರ ಮದುವೆ ಶನಿವಾರ-ರವಿವಾರ ಬಲಿಜ ಶ್ರೇಯ ಭವನದಲ್ಲಿ ನಡೆಯಲು ನಿಗದಿಯಾಗಿತ್ತು. ವಧು-ವರರ ಸಂಬಂಧಿಗಳು ಎಲ್ಲರೂ ಸಮುದಾಯ ಭವನಕ್ಕೆ ಮದುವೆಗೆಂದು ಆಗಮಿಸಿದ್ದರು. ಶನಿವಾರ ರಾತ್ರಿ ಆರತಕ್ಷತೆ ಕೂಡಾ ನಡೆದಿದೆ. ಊಟದ ಸಂದರ್ಭ ರಾತ್ರಿ ವಧುವಿನ ಕಡೆಯವರು ಕುಡಿಯುವ ನೀರು ಕೊಡಲು ಗಲಾಟೆ ಮಾಡಿರುವ ಕುರಿತು ವರನ ಮಂದಿ ಆರೋಪ ಮಾಡಿದ್ದಾರೆ.

ನಂತರ ಗಲಾಟೆ ಪ್ರಾರಂಭವಾಗಿದೆ. ಇದರಿಂದ ಬೇಸರಗೊಂಡ ವಧು ಅನಿತಾ, ರವಿವಾರ ಬೆಳಗ್ಗೆ ಮದುವೆಯಾಗಲು ನಿರಾಕರಣೆ ಮಾಡಿದ್ದಾರೆ. ವರನ ಕಡೆಯವರು ಮದುವೆಗೆ ಒಪ್ಪಿಕೊಳ್ಳುವಂತೆ ಎಷ್ಟೇ ಕೇಳಿಕೊಂಡರು ವಧು ಒಪ್ಪಲಿಲ್ಲ.

ವರ ಮನೋಜ್‌ ಕುಮಾರ್‌ ಮತ್ತು ವಧು ಅನಿತಾ ಇವರಿಬ್ಬರೂ ಬೆಂಗಳೂರಿನ ಖಾಸಗಿ ಸಾಫ್ಟ್‌ವೇರ್‌ ಕಂಪನಿಯಲ್ಲಿ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.

You may also like