Education Minister Madhubangarappa: ವೃಂದ ಮತ್ತು ನೇಮಕಾತಿ ನಿಯಮಗಳು ಬೇರೆ ಬೇರೆಯಾಗಿರುವುದರಿಂದ ಸರಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಂಬಡ್ತಿ ನೀಡಲು ಸಾಧ್ಯವಿಲ್ಲ. ಆದರೂ ಈ ಕುರಿತು ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.
ರಾಮೋಜಿ ಗೌಡ ಪ್ರಶ್ನೆಗೆ ವಿಧಾನಪರಿಷತ್ ಪ್ರಶ್ನೋತ್ತರ ಸಮಯದಲ್ಲಿ ಅವರು ಈ ರೀತಿ ಉತ್ತರ ನೀಡಿದರು. ಫ್ರೊ..ಎಲ್.ಆರ್.ವೈದ್ಯನಾಥನ್ ವರದಿ ಆಧರಿಸಿ ದೈಹಿಕ ಶಿಕ್ಷಕರಿಗೆ ಮುಂಬಡ್ತಿ ನೀಡುವುದನ್ನು ಪರಿಶೀಲನೆ ಮಾಡಲಾಗುವುದು ಎಂದರು. ದೈಹಿಕ ಶಿಕ್ಷಕರು ಬಿಇಡಿ ಪದವಿಯನ್ನು ಹೊಂದಿರುವುದಿಲ್ಲ. ಹಾಗಾಗಿ ಮುಂಬಡ್ತಿ ನೀಡುವುದು ಸಮಸ್ಯೆಯಾಗಿದೆ ಎಂದರು. ದೈಹಿಕ ಶಿಕ್ಷಕರಿಗೆ ವಿಷಯ ಭೋದನೆ ತರಬೇತಿಯಿಲ್ಲ. ಹೀಗಾಗಿ ಸಹ ಶಿಕ್ಷಕರ ಅನುಪಸ್ಥಿತಿಯಲ್ಲಿ ವಿಷಯ ಭೋದನೆ ಮಾಡಲು ಆಗುವುದಿಲ್ಲ.
ದೈಹಿಕ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡಲಾಗುತ್ತಿದ್ದು ಇವರ ಅನುಭವ, ಪ್ರಾವೀಣ್ಯತೆಯ ಆಧಾರದ ಮೇಲೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ, ಸಹಾಯಕ ನಿರ್ದೇಶಕರು (ದೈಹಿಕ ಶಿಕ್ಷಣ), ಸಹ ನಿರ್ದೇಶಕರು (ದೈಹಿಕ ಶಿಕ್ಷಣ) ಹುದ್ದೆಗಳಿಗೆ ಮುಂಬಡ್ತಿ ಇದೆ. ಈ ಕಾರಣದಿಂದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಖ್ಯ ಶಿಕ್ಷಕ ಹುದ್ದೆಗೆ ಮುಂಬಡ್ತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
