7
Delivery boy: ಬಿಸಿ ಟೀ ಡೆಲಿವರಿ ವೇಳೆ ಮೈ ಮೇಲೆ ಟೀ ಚೆಲ್ಲಿ ಗಂಭೀರ ಗಾಯಗೊಂಡಿದ್ದ ಡೆಲಿವರಿ ಬಾಯ್ (delivery boy ) ಮೈಕೆಲ್ ಗಾರ್ಸಿಯಾಗೆ ಬರೋಬ್ಬರಿ 50 ಮಿಲಿಯನ್ ಡಾಲರ್ ಎಂದರೆ ಬರೋಬ್ಬರಿ 434 ಕೋಟಿ ಪರಿಹಾರ ನೀಡುವಂತೆ ಸ್ಟಾರ್‌ಬಕ್ಸ್‌ಗೆ ಆದೇಶ ನೀಡಲಾಗಿದೆ.
ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ 2020ರಲ್ಲಿ ಘಟನೆ ನಡೆದಿತ್ತು. ಟೀ ತೆಗೆದುಕೊಂಡು ಹೋಗುತ್ತಿದ್ದ ಪಾತ್ರೆಯ ಮುಚ್ಚಳ ಸಡಿಲವಾಗಿದ್ದ ಪರಿಣಾಮ ಟೀ ಚೆಲ್ಲಿ ಡೆಲಿವರಿ ಬಾಯ್ ಗಂಭೀರ ಗಾಯಗೊಂಡಿದ್ದ, ಘಟನೆಯಲ್ಲಿ ನರಕ್ಕೆ ಹಾನಿಯಾಗಿದ್ದಲ್ಲದೇ ಅವನನ್ನು ಶಾಶ್ವತವಾಗಿ ವಿರೂಪಗೊಳ್ಳುವಂತೆ ಮಾಡಿತ್ತು. ಹೀಗಾಗಿ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ನ್ಯಾಯಾಧೀಶರು ಸಂತ್ರಸ್ತ ಯುವಕನಿಗೆ ಈ ಭಾರಿ ಮೊತ್ತದ ಪರಿಹಾರ ನೀಡುವಂತೆ ಆದೇಶ ನೀಡಿದೆ.
