4
Yakshagana: ಯಕ್ಷಗಾನ ಕ್ಷೇತ್ರದ ಮದ್ದಲೆಗಾರ 90 ವರ್ಷದ ಬರ್ಗುಳ ಗೋಪಾಲಕೃಷ್ಣ ಕುರುಪ್ ಮಂಗಳವಾರ (ಮಾ.19) ರಂದು ನಿಧನ ಹೊಂದಿದ್ದಾರೆ.
ಗೋಪಾಲಕೃಷ್ಣ ಕುರುಪ್ ಅವರು ಚೆಂಡೆ-ಮದ್ದಲೆ ನುಡಿತಗಳಲ್ಲಿ ಶಾಸ್ತ್ರಜ್ಞಾನವನ್ನು ಪಡೆದುಕೊಂಡಿದ್ದರು. ಅದನ್ನು ಪಠ್ಯರೂಪದಲ್ಲಿ ಪ್ರಕಟಿಸಿದವರಲ್ಲಿ ಇವರು ಮೊದಲಿಗರು. ಭಾಗವತಿಕೆಯ ಜ್ಞಾನ ಕೂಡಾ ಇವರಿಗಿತ್ತು. 1952 ಇವರು ಯಕ್ಷಗಾನ ಕ್ಷೇತ್ರವನ್ನು ಪ್ರವೇಶ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲದಲ್ಲಿ ಇವರು ನೆಲೆಸಿದವರು. ಮೂಲತಃ ಇವರು ಕೇರಳದವರು.
ಗೋಪಾಲಕೃಷ್ಣ ಕುರುಪ್ ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
