Home » Bangalore: ಮುಟ್ಟಬೇಡ ಬ್ಯೂಟಿ ಹಾಳಾಗುತ್ತೆ ಎಂದ ಹೈಫೈ ಹೆಂಡತಿ ಕೇಸ್‌ಗೆ ಹೊಸ ಟ್ವಿಸ್ಟ್‌!

Bangalore: ಮುಟ್ಟಬೇಡ ಬ್ಯೂಟಿ ಹಾಳಾಗುತ್ತೆ ಎಂದ ಹೈಫೈ ಹೆಂಡತಿ ಕೇಸ್‌ಗೆ ಹೊಸ ಟ್ವಿಸ್ಟ್‌!

0 comments

Bangalore: ಹೆಂಡತಿ ಬೇಕು, ಆದರೆ ಸಂಸಾರ ಬೇಡ, ನನ್ನನ್ನು ಮುಟ್ಟಿದರೆ ಬ್ಯೂಟಿ ಹಾಳಾಗುತ್ತೆ ಎಂದು ಆರೋಪ ಮಾಡಿದ ಪತಿ ವಿರುದ್ಧ ಇದೀಗ ಹೈಫೈ ಹೆಂಡತಿ ಕೂಡಾ ಎಂಟ್ರಿ ನೀಡಿದ್ದು, ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದೆ.

ಶ್ರೀಕಾಂತ್‌ ಪತ್ನಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅವರೇ ನನಗೆ ಹೊಡಿಯೋದು, ಬಡಿಯೋದು. ಸೊಸೆ ಅಂದರೆ ಮನೆ ಕೆಲಸದವಳು ಅಂದ್ಕೊಂಡಿದ್ರು, ಈ ಹಿಂದೆ ಈ ಕುರಿತು ವೈಯಾಲಿಕವಲ್‌ ಠಾಣೆಯಲ್ಲಿ ದೂರು ನೀಡಿದ್ದೆ. ವರದಕ್ಷಿಣೆ ಕಿರುಕುಳ ಕೂಡಾ ನೀಡಿದ್ದಾರೆ. ಅವರ ತಾಯಿ ಬೆಡ್‌ ರೂಂ ನಲ್ಲಿ ಕ್ಯಾಮೆರಾ ಫಿಕ್ಸ್‌ ಮಾಡು, ಡೈವರ್ಸ್‌ ತಗೋ ಎಂದು ಹೇಳಿದ್ದಾರೆ.

ಸರಿಯಾಗಿ ಊಟ ನೀಡುತ್ತಿರಲಿಲ್ಲ, ಮನೆಗೆ ಸರಿಯಾಗಿ ಸಾಮಾನು ತರ್ತಿರಲಿಲ್ಲ. ಇನ್ನು ನನಗೆ 5 ಸಾವಿರ ಕೊಡ್ತಾರಾ? ಮಕ್ಕಳನ್ನು ಮಾಡಿಬಿಡು, ಅವಳು ಎಲ್ಲೂ ಹೋಗಲ್ಲ ಎಂದು ಅವರ ಅಣ್ಣ ಹೇಳಿದ್ದಾರೆ. ಯಾವ ಧೈರ್ಯದ ಮೇಲೆ ನಾನು ಮಕ್ಕಳು ಮಾಡಿಕೊಳ್ಳಲಿ. ಅವರ ಮನೆಯವರೇ ನನಗೆ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ.

You may also like