Home » Dharmasthala: ದಕ್ಷಿಣ ಕನ್ನಡ: ಕಾಡಾನೆ ಉಪಟಳ ತಡೆಗೆ ಆನೆ ಕಂದಕ ನಿರ್ಮಾಣ!

Dharmasthala: ದಕ್ಷಿಣ ಕನ್ನಡ: ಕಾಡಾನೆ ಉಪಟಳ ತಡೆಗೆ ಆನೆ ಕಂದಕ ನಿರ್ಮಾಣ!

0 comments
Hassan Elephant Attack

Mangaluru: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕುಗಳಲ್ಲಿ ಆನೆಗಳು ಕೃಷಿಕರ ತೋಟಗಳಿಗೆ ನುಗ್ಗಿ ದಾಂಧಲೆ ಮಾಡುವುದರಿಂದ ಅಪಾರ ಹಾನಿಗಳನ್ನುಂಟು ಮಾಡುತ್ತದೆ. ಇದನ್ನು ತಡೆಗಟ್ಟಲು ಹಲವು ಪ್ರಯತ್ನವನ್ನು ಅರಣ್ಯ ಇಲಾಖೆ ಹಾಗೂ ಊರವರು ಮಾಡುತ್ತಲೇ ಇದ್ದಾರೆ.

ಇದೀಗ ರಾಜ್ಯ ಸರಕಾರ ಆನೆ ಕಂದಕ ನಿರ್ಮಾಣಕ್ಕೆ ಮುಂದಾಗಿದೆ. ಕೃಷಿ ಭೂಮಿಗೆ ನುಗ್ಗುವ, ಆನೆಯನ್ನು ನಿಯಂತ್ರಣ ಮಾಡಿ ಮರಳಿ ಕಾಡಿಗೆ ಕಳುಹಿಸುವ ಯತ್ನದ ಯೋಜನೆಯ ಭಾಗವಾಗಿದೆ.

ಧರ್ಮಸ್ಥಳ ಗ್ರಾಮದ ನೇರ್ತನೆ ಪ್ರದೇಶಕ್ಕೆ ಇದೀಗ ರಾಜ್ಯ ಸರಕಾರ ಆನೆ ಕಂದಕ ಮಾಡಲು ಐದು ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಇದರ ಕಾಮಗಾರಿ ನಡೆಯುತ್ತಿದೆ.

ಒಮ್ಮೆ ಆನೆ ಕೃಷಿ ತೋಟಕ್ಕೆ ಎಂಟ್ರಿ ನೀಡಿದರೆ, ಕಷ್ಟಪಟ್ಟು ಅದನ್ನು ಓಡಿಸಿದರೆ ಮತ್ತೆ ಎರಡು ದಿನದಲ್ಲಿ ಎಂಟ್ರಿ ನೀಡಿ ಕೃಷಿಗೆ ಹಾನಿಯುಂಟು ಮಾಡುತ್ತಿದೆ. ಇದರಿಂದಾಗಿ ಕಳೆದ ಎರಡು ವರ್ಷದಲ್ಲಿ ಲಕ್ಷಾಂತರ ಮೌಲ್ಯದ ಕೃಷಿಗೆ ಕಾಡಾನೆಗಳು ಹಾನಿಯನ್ನುಂಟು ಮಾಡಿದೆ.

ಹೀಗಾಗಿ ಸರಕಾರದಿಂದ ಅರಣ್ಯ ಇಲಾಖೆಯ ಮೂಲಕ ಐದು ಲಕ್ಷ ರೂ. ಮಂಜೂರಾಗಿದ್ದು, ಆನೆ ಕಂದಕವು ಒಂದೂವರೆ ಕಿ.ಮೀ.ದೂರದವರೆಗೆ ನಿರ್ಮಾಣವಾಗಲಿದೆ.

You may also like