Home » Meerat Murder Case: ಅಪ್ಪ ಡ್ರಮ್‌ನೊಳಗಿದ್ದಾರೆ, ಮಗುವಿನಿಂದ ಬಯಲಾಯ್ತು ಅಪ್ಪನ ಕೊಲೆ ರಹಸ್ಯ!

Meerat Murder Case: ಅಪ್ಪ ಡ್ರಮ್‌ನೊಳಗಿದ್ದಾರೆ, ಮಗುವಿನಿಂದ ಬಯಲಾಯ್ತು ಅಪ್ಪನ ಕೊಲೆ ರಹಸ್ಯ!

0 comments

Meerat Murder Case: ಮೀರತ್‌ನಲ್ಲಿ ಸೌರಭ್‌ ರಜಪೂತ್‌ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಕಿಂಗ್‌ ನ್ಯೂಸ್‌ ಹೊರ ಬಂದಿದೆ. ಸೌರಭ್‌ ತನ್ನ ಮಗಳ ಆರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ಲಂಡನ್‌ನಿಂದ ಭಾರತಕ್ಕೆ ಬಂದಿದ್ದ. ಆದರೆ ತಾನು ಪ್ರೀತಿಸಿ ಮದುವೆಯಾಗಿದ್ದ ಪತ್ನಿಯಿಂದಲೇ ಕೊಲೆಯಾಗಿ ಹೋಗಿದ್ದ.

ಕೊಲೆಯ ನಂತರ ಪಿಹು ತನ್ನ ಅಜ್ಜಿಯ ಬಳಿ ಅಪ್ಪ ಡ್ರಮ್‌ನಲ್ಲಿದ್ದಾರೆ ಎಂದು ಹೇಳಿದ್ದಳು. ಪ್ರಕರಣ ಬೆಳಕಿಗೆ ಬಂದ ನಂತರ ಮಗುವಿಗೆ ವಿಚಾರ ತಿಳಿದಿದೆ ಎಂದು ಹೇಳಲಾಗಿದೆ.

ಸೌರಭ್‌ ಪತ್ನಿ ಮುಸ್ಕಾನ್‌ ಮತ್ತು ಆಕೆಯ ಪ್ರಿಯಕರ ಸಾಹಿಲ್‌ ಸೇರಿ ಆತನನ್ನು ಕೊಲೆ ಮಾಡಿ, ದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಹಾಕಿದ್ದರು. ಅಷ್ಟು ಮಾತ್ರವಲ್ಲದೇ ಕೊಂದ ನಂತರ ಒಂದು ದೊಡ್ಡ ಪ್ಲಾಸ್ಟಿಕ್‌ ಡ್ರಮ್‌, ಸಿಮೆಂಟ್‌ ಮತ್ತು ಮರಳನ್ನು ತುಂಬಿಸಿ ಅದರೊಳಗೆ ಶವವನ್ನು ಮುಚ್ಚಿ ಅಡಗಿಸಿಟ್ಟಿದ್ದರು.

ಮುಸ್ಕಾನ್‌ ಮತ್ತು ಸಾಹಿಲ್‌ ಬಾಲ್ಯ ಸ್ನೇಹಿತರು. ಇವರಿಬ್ಬರು ವಾಟ್ಸಪ್‌ ಗ್ರೂಪ್‌ನ ಮೂಲಕ ಸಂಪರ್ಕಕ್ಕೆ ಬಂದಿದ್ದಾರೆ. ಸಾಹಿಲ್‌ ಆಕೆಯನ್ನು ಮಾದಕ ದ್ರವ್ಯಗಳ ವ್ಯಸನಿಯನ್ನಾಗಿ ಮಾಡಿದ್ದ. ನ್ಯಾಯಾಲಯವು ಇಬ್ಬರನ್ನೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಸೌರಭ್‌ ರಜಪೂತ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಮನೆಗೆ ತಂದು ನಂತರ ತಡರಾತ್ರಿ ಅಂತ್ಯಕ್ರಿಯೆ ಮಾಡಲಾಗಿದೆ.

You may also like