Home » Bengaluru: ಸ್ನೇಹಿತೆಯ ಹಾಸ್ಟೆಲ್‌ಗೆ ಬುರ್ಖಾ ಧರಿಸಿ ನುಗ್ಗಿದ ಯುವಕ!

Bengaluru: ಸ್ನೇಹಿತೆಯ ಹಾಸ್ಟೆಲ್‌ಗೆ ಬುರ್ಖಾ ಧರಿಸಿ ನುಗ್ಗಿದ ಯುವಕ!

0 comments
Udupi

Bengaluru: ಯುವಕನೋರ್ವ ಸ್ನೇಹಿತೆಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಹುಡುಗಿಯರ ಹಾಸ್ಟೆಲ್‌ಗೆ ನುಗ್ಗಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಕಾಲೇಜು ಆವರಣದಲ್ಲಿ ನಡೆದಿದೆ.

ಹಾಸ್ಟೆಲ್‌ಗೆ ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಯುವಕನೋರ್ವ ಬುರ್ಖಾ ಧರಿಸಿ ಜ್ಞಾನಭಾರತಿ ಕಾಲೇಜಿನ ರಮಾಬಾಯಿ ಹಾಸ್ಟೆಲ್‌ಗೆ ಪ್ರವೇಶ ಮಾಡಿದ್ದ. ಯುವಕನನ್ನು ಕಂಡ ಕೂಡಲೇ ವಿದ್ಯಾರ್ಥಿನಿಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿದ್ದು, ಯುವಕನ ಬಂಧನ ಮಾಡಿದ್ದಾರೆ.

ಬುರ್ಖಾ ಧರಿಸಿದ ಯುವಕನನ್ನು ಮಾಲೂರು ಮೂಲದವನು ಎನ್ನಲಾಗಿದೆ.

ಸ್ನೇಹಿತೆಯಿಂದಲೇ ಬಟ್ಟೆ ತೆಗೆದುಕೊಂಡು ಹಾಸ್ಟೆಲ್‌ಗೆ ನುಗ್ಗಿದ್ದ ಯುವಕನಿಗೆ ಉಳಿದುಕೊಳ್ಳಲು ಸ್ಥಳವಿಲ್ಲದ ಕಾರಣ ಆಕೆಯೇ ಹಾಸ್ಟೆಲ್‌ನಲ್ಲಿ ವ್ಯವಸ್ಥೆ ಮಾಡಿರುವುದು ತಿಳಿದು ಬಂದಿದೆ. ಈ ಘಟನೆ ಕುರಿತು ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

You may also like