Home » Karnataka Bandh: ಶನಿವಾರ ಬಸ್‌ ಬಂದ್‌ ಇಲ್ಲ; ಕೆನರಾ, ದ.ಕನ್ನಡ ಬಸ್‌ ಮಾಲಕರ ಸಂಘದಿಂದ ಮಹತ್ವದ ಮಾಹಿತಿ!

Karnataka Bandh: ಶನಿವಾರ ಬಸ್‌ ಬಂದ್‌ ಇಲ್ಲ; ಕೆನರಾ, ದ.ಕನ್ನಡ ಬಸ್‌ ಮಾಲಕರ ಸಂಘದಿಂದ ಮಹತ್ವದ ಮಾಹಿತಿ!

0 comments

Mangaluru; ಬೆಳಗಾವಿಯಲ್ಲಿ ಮರಾಠಿಗರ ಪುಂಡಾಡಿಕೆ ಖಂಡನೆ ಮಾಡಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಲವು ಕನ್ನಡ ಪರ ಸಂಘಟನೆಗಳು ಶನಿವಾರ (ಮಾ.22) ರಂದು ರಾಜ್ಯ ಬಂದ್‌ಗೆ ಕರೆ ನೀಡಿದೆ. ಈ ಕುರಿತು ಇದೀಗ ದಕ್ಷಿಣ ಕನ್ನಡ ಬಸ್‌ ಮಾಲಕರ ಸಂಘ ಹಾಗೂ ಕೆನರಾ ಬಸ್‌ ಮಾಲಕರ ಸಂಘ ಈ ಬಂದ್‌ಗೆ ಸಹಕಾರ ನೀಡುವುದಿಲ್ಲ ಎಂದು ತಿಳಿಸಿದೆ.

ಬಸ್‌ ಬಂದ್‌ ಮಾಡುವ ಕುರಿತು ಯಾವುದೇ ಸಂಘಟನೆಗಳು ನಮ್ಮನ್ನು ಕೇಳಿಕೊಂಡಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುವ ಕಾರಣ ಬಂದ್‌ ಮಾಡುವುದು ಇಲ್ಲ ಎಂದು ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್‌ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

You may also like