Home » University: ವಿವಿ ವಿಲೀನಕ್ಕೆ ಚಿಂತನೆ: ಮಕ್ಕಳ ಅಭಿಪ್ರಾಯ ಪಡೆದು ಸಂಪುಟ ಸಭೆಯಲ್ಲಿ ತೀರ್ಮಾನ – ಡಿಸಿಎಂ ಡಿಕೆ ಶಿವಕುಮಾರ್

University: ವಿವಿ ವಿಲೀನಕ್ಕೆ ಚಿಂತನೆ: ಮಕ್ಕಳ ಅಭಿಪ್ರಾಯ ಪಡೆದು ಸಂಪುಟ ಸಭೆಯಲ್ಲಿ ತೀರ್ಮಾನ – ಡಿಸಿಎಂ ಡಿಕೆ ಶಿವಕುಮಾರ್

0 comments

University: ಯಾವುದೇ ವಿಶ್ವವಿದ್ಯಾಲಯವನ್ನು ಮುಚ್ಚುವ ಬಗೆ ನಮ್ಮ ಮುಂದಿಲ್ಲ ಆದರೆ ಮಕ್ಕಳ ಭವಿಷ್ಯ ದೃಷ್ಟಿಯಿಂದ ಈಗಿರುವ ವಿಶ್ವವಿದ್ಯಾಲಯದೊಂದಿಗೆ ವಿಲೀನ ಪ್ರಕ್ರಿಯೆ ನಡೆಸಲು ಚಿಂತನ ಹರಿಸಲಾಗಿದೆ. ಕೊಡಗು(Kodagu) ವಿಶ್ವವಿದ್ಯಾಲಯ ಸಂಬಂಧಿಸಿದಂತೆ ಮಕ್ಕಳ ಅಭಿಪ್ರಾಯವನ್ನು ಸಂಗ್ರಹಿಸುವ ಅಭಿಯಾನವನ್ನು ಈಗಲೇ ಆರಂಭಿಸಲಾಗಿದೆ.

ಅವರ ಅಭಿಪ್ರಾಯವನ್ನು ಕೇಂದ್ರೀಕರಿಸಿ ಸಂಪುಟದ ಮುಂದಿಟ್ಟು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್(DCM D K Shivakumar) ತಿಳಿಸಿದ್ದಾರೆ.

ಅವರು ಇಂದು ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಕ್ಕೆ ಆಗಮಿಸಿ ಪೂಜೆ ಸಲ್ಲಿಸುವ ಕಾರ್ಯಕ್ರಮದ ಮುಂಚಿತವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂದರ್ಭ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ ವಿಶ್ವವಿದ್ಯಾಲಯದ ಬಗ್ಗೆ ಹೆಚ್ಚು ಒಲವು ಇರುವುದರಿಂದ ಈ ಹಿಂದೆ ಸ್ಥಾಪಿಸಲಾದ ವಿಶ್ವವಿದ್ಯಾಲಯಗಳು ಇತರ ಹೆಸರುಗಳಿಸಿದ ವಿಶ್ವವಿದ್ಯಾಲಯದೊಂದಿಗೆ ಸೇರ್ಪಡಿಗೊಳಿಸುವುದು ನಮ್ಮ ಚಿಂತನೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇರುವ ಸಿಬ್ಬಂದಿಗಳು ಕೊಡಗು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಹೊಂದದರಿಂದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ವಿಲೀನ ಪ್ರಕ್ರಿಯೆಗೆ ಚಿಂತನೆಹರಿಸಲಾಗಿದೆ ಹೊರತು ಬೇರೆ ಯಾವುದೇ ಉದ್ದೇಶದಿಂದ ಅಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದರು.

You may also like