Home » Digital Arrest: 2 ತಿಂಗಳ ಕಾಲ ಡಿಜಿಟಲ್ ಅರೆಸ್ಟ್‌: ₹20 ಕೋಟಿ ಕಳೆದುಕೊಂಡ 86 ವರ್ಷದ ವೃದ್ಧೆ

Digital Arrest: 2 ತಿಂಗಳ ಕಾಲ ಡಿಜಿಟಲ್ ಅರೆಸ್ಟ್‌: ₹20 ಕೋಟಿ ಕಳೆದುಕೊಂಡ 86 ವರ್ಷದ ವೃದ್ಧೆ

0 comments

Digital Arrest: ಮುಂಬೈನಲ್ಲಿ 86 ವರ್ಷದ ಮಹಿಳೆಯನ್ನು 2 ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ, ಅವರ ಬ್ಯಾಂಕ್ ಖಾತೆಯಿಂದ ₹20.25 ಕೋಟಿ ದೋಚಲಾಗಿದೆ. ಈ ಸಮಯದಲ್ಲಿ ವೃದ್ಧೆಯನ್ನು ಬೆದರಿಸಲಾಗಿದ್ದು, ಮಕ್ಕಳನ್ನೂ ಬಂಧನ ಮಾಡುವುದಾಗಿ ವಂಚಕರು ಹೇಳಿದ್ದರು. ಹಾಗೆ ಅವರ ಬ್ಯಾಂಕ್ ಖಾತೆಗಳನ್ನೆಲ್ಲಾ ಸ್ಥಗಿತಗೊಳಿಸುವ ಬೆದರಿಕೆ ಒಡ್ಡಿದ್ದರು. ವಾಟ್ಸ್ ಅಪ್ ಕರೆ ಮಾಡಿ ವೃದ್ಧೆಯನ್ನು ಬೆದರಿಸಲಾಗಿದೆ.

ವೃದ್ದೆಗೆ ಫೋನ್ ಮಾಡಿದ್ದ ಸಂದೀಪ್ ರಾವ್ ಎಂಬಾತ ತನ್ನನ್ನು ತಾನು ಸಿಬಿಐ ಅಧಿಕಾರಿ ಎಂದು ಹೇಳಿ, ನಿಮ್ಮ ಖಾತೆ ಅಕ್ರಮ ಚಟುವಟಿಕೆಗಳಿಗೆ ಬಳಸಲಾಗಿದೆ ಎಂದಿದ್ದನು. ತನ್ನ ಬಳಿ ಬಂಧನ ವ್ಯಾರೆಂಟ್ ಇದೆ, ನೀವು ತನಿಖೆಗೆ ಸಹಕರಿಸದಿದ್ದರೆ ಪೊಲೀಸರನ್ನು ಮನೆಗೆ ಕಳುಹಿಸಿ ಕೊಡಲಾಗುವುದು ಎಂದು ವೃದ್ಧೆಗೆ ಹೇಳಿದ್ದಾನೆ.

ಎರಡು ತಿಂಗಳ ಕಾಲ ತನ್ನ ಹಿಡತದಲ್ಲಿ ಇಟ್ಟುಕೊಂಡಿದ್ದ ವಂಚಕರು, ಯಾವುದೇ ಸಂಬಂಧಿಕರೊಂದಿಗೆ ಮಾತನಾಡದಂತೆ ತಾಕೀತು ಮಾಡಿದ್ದರು. ಈ ವೇಳೆ ವೃದ್ಧೆಯ ವರ್ತನೆ ಬದಲಾಗಿದ್ದನ್ನು ಮನೆ ಕೆಲಸದಾಕೆ ಗಮನಿಸಿದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ.

You may also like