4
Heat Wave: ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದೆ. ಸಿಕ್ಕಾಪಟ್ಟೆ ಬಿಸಿಲು ಇರುವುದರಿಂದ ಒಡಿಶಾ ರಾಜ್ಯದಲ್ಲಿ ಜನರು ಹೊರಗಡೆ ಹೋಗುವುದನ್ನೇ ತಪ್ಪಿಸ್ತಾ ಇದ್ದಾರೆ.
ಇದರಲ್ಲಿ ಮುಖ್ಯವಾಗಿ ಶಾಲೆ, ಕಾಲೇಜಿಗೆ ಹೋಗೋ ವಿದ್ಯಾರ್ಥಿಗಳಿಗೆ ಕಷ್ಟ ಎದುರಾಗಿದೆ. ಹೀಗಾಗಿ ಒಡಿಶಾ ರಾಜ್ಯದ ಶಾಲಾ ಶಿಕ್ಷಣ ಇಲಾಖೆ ಶಾಲಾ ಸಮಯವನ್ನು ಬದಲಾವಣೆ ಮಾಡಿದೆ. ಅಂದರೆ 1 ರಿಂದ 12ನೇ ತರಗತಿವರೆಗೆ ಬೆಳಗ್ಗೆ 6.30 ರಿಂದ ಬೆಳಗ್ಗೆ 10.30ರವರೆಗೆ ಮಾತ್ರ ಶಾಲೆಗಳು ಇರುತ್ತದೆ. ಈ ರೂಲ್ಸ್ ಇವತ್ತಿಂದಲೇ ಜಾರಿಗೆ ಬರಲಿದೆ.
ಅದೇ ರೀತಿ ಎಲ್ಲಾ ಅಂಗನವಾಡಿ ಸೆಂಟರ್‌ಗಳು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ಇರೋ ಬದಲು ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಇರುತ್ತದೆ ಎಂದು ಒಡಿಶಾ ಶಿಕ್ಷಣ ಇಲಾಖೆ ಹೇಳಿದೆ.
