Home » Supreme Court: ಸ್ತ*ನಗಳನ್ನು ಹಿಡಿಯುವುದು ಅತ್ಯಾಚಾರವಲ್ಲ-ಹೈಕೋರ್ಟ್‌ ತೀರ್ಪು, ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸಬೇಕು-ಸಚಿವೆ ಅನ್ನಪೂರ್ಣದೇವಿ

Supreme Court: ಸ್ತ*ನಗಳನ್ನು ಹಿಡಿಯುವುದು ಅತ್ಯಾಚಾರವಲ್ಲ-ಹೈಕೋರ್ಟ್‌ ತೀರ್ಪು, ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸಬೇಕು-ಸಚಿವೆ ಅನ್ನಪೂರ್ಣದೇವಿ

0 comments

Supreme Court: ಮಹಿಳೆಯರ ಸ್ತನಗಳನ್ನು ಹಿಡಿಯುವುದು, ಪೈಜಾಮದ ದಾರವನ್ನು ತುಂಡು ಮಾಡುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನದ ಅಪರಾಧ ಆಗುವುದಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಶುಕ್ರವಾರ ಒತ್ತಾಯ ಮಾಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ, ಅಲಹಾಬಾದ್‌ ಹೈಕೋರ್ಟ್‌ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ. ನಾಗರಿಕ ಸಮಾಜದಲ್ಲಿ ಇಂಥ ತೀರ್ಪಿಗೆ ಜಾಗವಿಲ್ಲʼ ಎಂದು ಕಟುವಾಗಿ ಸಂಸತ್ತಿನ ಹೊರಗಡೆ ಸುದ್ದಿಗಾರರ ಜೊತೆ ಹೇಳಿದರು.

ಇದು ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಸಮಾಜದಲ್ಲಿ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದರು.

 

You may also like