Home » Uttarapradesh: ಯೂಟ್ಯೂಬ್‌ ನೋಡಿ ತನಗೆ ತಾನೇ ಸರ್ಜರಿ ಮಾಡಿದ ಯುವಕ!

Uttarapradesh: ಯೂಟ್ಯೂಬ್‌ ನೋಡಿ ತನಗೆ ತಾನೇ ಸರ್ಜರಿ ಮಾಡಿದ ಯುವಕ!

0 comments

Uttarapradesh: ಯೂಟ್ಯೂಬ್ ವೀಡಿಯೋ ನೋಡಿ ತನಗೆ ತಾನೇ ಶಸ್ತ್ರಚಿಕಿತ್ಸೆ ಮಾಡಿದ ಯುವಕನೋರ್ವ ದೊಡ್ಡ ಆಪತ್ತಿಗೆ ಒಳಗಾದ ದಾರುಣ ಘಟನೆ ಮಥುರಾದಲ್ಲಿ ನಡೆದಿದೆ. ಏಳು ಇಂಚಿನಷ್ಟು ಆಳವಾದ ಗಾಯ ಮಾಡಿದ ಯುವಕನನ್ನು ಆಸ್ಪತ್ರೆಗೆ ಸೇರಿಸಿದ ಮನೆಯವರು ನಂತರ ಯವಕರ ಅಪಾಯಾದಿಂದ ಪಾರಾಗಿದ್ದಾನೆ.

ರಾಜಾಬಾಬು ಎಂಬ 32 ವರ್ಷದ ಯುವಕ ಈ ಕೃತ್ಯವೆಸಗಿದ ಯುವಕ.

ಮಥುರೆಯಲ್ಲಿ ಕಲ್ಯಾಣಮಂಟಪವೊಂದರ ಮಾಲೀಕ. ಈತ ಹೊಟ್ಟೆನೋವಿನಿಂದ ನರಳುತ್ತಿದ್ದ ಈತನಿಗೆ ಅಪೆಂಡಿಕ್ಸ್‌ ಅಪರೇಷನ್‌ ಮಾಡಬೇಕೆಂದು ವೈದ್ಯರು ಈ ಮೊದಲೇ ತಿಳಿಸಿದ್ದರು. ಆದರೆ ಈತ ಬುಧವಾರ ತನ್ನ ಕೋಣೆಯೊಳಗೆ ಸೇರಿಕೊಂಡು ತಾನೇ ಸರ್ಜರಿ ಮಾಡಿಕೊಳ್ಳಲು ಮುಂದಾಗಿದ್ದಾನೆ. ಇದರಿಂದ ಆತನಿಗೆ ಆಳವಾದ ಗಾಯವಾಗಿದೆ.

ಗಾಯ ಆಳವಾಗಿದ್ದು, ಹೆಚ್ಚು ರಕ್ತ ಸ್ರಾವವಾಗಿದೆ. ಆಗ ರಾಜಾಬುಬುಗೆ ಪರಿಸ್ಥಿತಿಯ ಅರಿವಾಗಿ, ಆಗಲೂ ತನಗೆ ತಾನೇ ಹೊಲಿಗೆ ಹಾಕಿಕೊಳ್ಳಲು ವಿಫಲ ಯತ್ನ ನಡೆಸಿದ್ದ. ನಂತರ ಕೊನೆಯ ಪ್ರಯತ್ನವೆಂಬಂತೆ ತನ್ನ ಮನೆಯವರಿಗೆ ಕರೆ ಮಾಡಿದ್ದ. ಕೂಡಲೇ ಆತನನ್ನು ಆಗ್ರಾದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಗ್ಯ ಸ್ಥಿರವಾಗಿದೆ ಎಂದು ಕುಟುಂಬವರು ಹೇಳಿದ್ದಾರೆ.

You may also like